ಸಾರಥಿಯ ಮನೆ ಮುಂದೆ ಸಾಲು ಸಾಲು ಆಟೋಗಳು ನಿಂತಿರೋದ್ಯಾಕೆ..!?

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನೆಯ ಮುಂದೆ ಸಿಕ್ಕಾಪಟ್ಟೆ ಆಟೋಗಳು ನಿಂತಿದ್ಯಂತೆ. ಆಟೋ ಚಾಲಕರಿಗೆ ದರ್ಶನ್ ಮನೆಯ ಬಳಿ ಏನು ಕೆಲಸ ಅಂತ ಯೋಚನೆ ಮಾಡುತ್ತಿದ್ದೀರಾ..? ಜಾಸ್ತಿ ಯೋಚನೆ ಮಾಡಬೇಡಿ ದರ್ಶನ್ ಅವರ ಮನೆಯ ಬಳಿ ಇರುವವರು ಕೇಲವ ಆಟೋ ಚಾಲಕರಷ್ಟೆ ಅಲ್ಲ.. ದರ್ಶನ್ ಅವರ ಅಭಿಮಾನಿಗಳು ಕೂಡ ಇದ್ದಾರೆ.
ಎರಡು ದಿನಗಳಿಂದ ದರ್ಶನ್ ಅವರ ಮನೆಯ ಬಳಿ ಸಾಕಷ್ಟು ಆಟೋ ಚಾಲಕರು ತಮ್ಮ ತಮ್ಮ ಆಟೋ ಸಮೇತರಾಗಿ ಬಂದಿದ್ದಾರೆ. ದರ್ಶನ್ ಅಭಿಮಾನಿಗಳು ಒಳ್ಳೆಯ ಆಲೋಚನೆಯನ್ನೆ ಮಾಡಿಕೊಂಡು ಮನೆಯ ಬಳಿ ಹೋಗಿದ್ದಾರೆ. ದರ್ಶನ್ ಅವರ ಆಟೋಗ್ರಾಫ್ ಅನ್ನು ಕೈ ಮೇಲೋ, ಪುಸ್ತಕದಲ್ಲಿಯೋ ತೆಗೆದುಕೊಂಡರೆ ಏನು ಚೆನ್ನಾಗಿರಲ್ಲಾ ಸದಾ ಅದು ನೆನಪಿನಲ್ಲಿ ಉಳಿದುಕೊಳ್ಳಬೇಕು ಎಂದುಕೊಂಡು ಪ್ರತಿನಿತ್ಯ ದುಡಿಮೆಗೆ ಆಧಾರವಾಗಿರುವಂತಹ ಆಟೋಗಳ ಮೇಲೆ ದರ್ಶನ್ ಅವರ ಆಟೋಗ್ರಾಫ್ ಹಾಕಿಸಿಕೊಳ್ಳುತ್ತಿದ್ದಾರೆ.
Comments