ಅರಮನೆ ಮೈದಾನದಲ್ಲಿ ನಡೆಯಲಿದೆ 'ಟಗರು' 125 ದಿನದ ಅದ್ದೂರಿ ಕಾರ್ಯಕ್ರಮ..!

08 Jun 2018 5:54 PM | Entertainment
434 Report

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನ 'ಟಗರು' ಸಿನಿಮಾ ಪ್ರದರ್ಶನವನ್ನು ಕಂಡು ನೂರು ದಿನಗಳನ್ನು ದಾಟಿದೆ. ಈ ವರ್ಷ ನೂರು ದಿನ ಪೂರೈಸಿದ ಮೊದಲ ಕನ್ನಡ ಸಿನಿಮಾ ಇದಾಗಿದ್ದು, ಈ ಸಂಭ್ರಮವನ್ನು ಚಿತ್ರತಂಡ ಅದ್ದೂರಿ ಕಾರ್ಯಕ್ರಮದ ಮೂಲಕ ಹಂಚಿಕೊಳ್ಳುವ ಪ್ಲಾನ್ ಮಾಡಿದೆಯಂತೆ.

'ಟಗರು' ಸಿನಿಮಾ 16ನೇ ವಾರ ಯಶಸ್ವಿ ಪ್ರದರ್ಶನವನ್ನು ಕಾಣುತ್ತಿದೆ. ಈ ಹಿನ್ನಲೆಯಲ್ಲಿ 125 ದಿನದ ಸಂಭ್ರಮ ಆಚರಣೆಯನ್ನು ಮಾಡಲು ಚಿತ್ರತಂಡವು ನಿರ್ಧಾರವನ್ನು ಮಾಡಿದೆ. 'ಟಗರು' ಚಿತ್ರದ ಈ ಅದ್ದೂರಿ ಕಾರ್ಯಕ್ರಮ ಜೂನ್ 23 ರಂದು ಬೆಂಗಳೂರಿನ ಅರಮನೆ ಮೈದಾನದ ವೈಟ್ ಪೆಟಲ್ಸ್ ನಲ್ಲಿ ನಡೆಯಲಿದೆ. ಸಂಜೆ ಐದು ಗಂಟೆಗೆ ಕಾರ್ಯಕ್ರಮ ಶುರು ಆಗಲಿದೆ.

Edited By

Manjula M

Reported By

Manjula M

Comments