ಗದ್ದೆಗಿಳಿದು ಕುಸ್ತಿ ಮಾಡಿದ ದೊಡ್ಡಗೌಡ್ರ ಮೊಮ್ಮಗ ನಿಖಿಲ್

ನಿಖಿಲ್ ಕುಮಾರ್ ಜಾಗ್ವಾರ್' ಸಿನಿಮಾದ ನಂತರ ನಾಯಕನಾಗಿರುವ ಎರಡನೇ ಚಿತ್ರ 'ಸೀತಾರಾಮ ಕಲ್ಯಾಣ' ಬಹುತೇಕ ಶೂಟಿಂಗ್ ಮುಗಿಸಿರುವ ಚಿತ್ರತಂಡ ಸದ್ಯ ನಾಯಕನ ಪರಿಚಯ ದೃಶ್ಯದ ಚಿತ್ರೀಕರಣವನ್ನು ಮೈಸೂರಿನಲ್ಲಿ ನಡೆಸುತ್ತಿದೆ.
ನಾಯಕನ ಎಂಟ್ರಿ ಸೀನ್ ಅದ್ದೂರಿಯಾಗಿ ಇರಲಿ ಎನ್ನುವ ಕಾರಣದಿಂದ ಹೊಲ-ಗದ್ದೆಯ ಮಧ್ಯೆ ಸಾಹಸ ದೃಶ್ಯವನ್ನು ಚಿತ್ರೀಕರಿಸುತ್ತಿದೆ ಚಿತ್ರತಂಡ. ಗದ್ದೆಯಲ್ಲಿ ನಡೆಯುತ್ತಿರುವ ಆಕ್ಷನ್ ಸನ್ನಿವೇಶವನ್ನು ಥೌಸೆಂಡ್ ಫ್ರೇಮ್ ಹೈಸ್ಪೀಡ್ ಸ್ಲೋ ಮೋಷನ್ ಫ್ಯಾಂಟಮ್ ಕ್ಯಾಮೆರಾವನ್ನು ಬಳಸಿ ಚಿತ್ರಿಕರಿಸಲಾಗುತ್ತಿದೆ. ಸುಮಾರು ಐವತ್ತಕ್ಕೂ ಹೆಚ್ಚು ಜನ ಫೈಟರ್ ಗಳನ್ನ ಬಳಸಿಕೊಂಡು ಸಾಹಸ ದೃಶ್ಯದ ಚಿತ್ರೀಕರಣವನ್ನು ನಡೆಸುತ್ತಿದ್ದಾರೆ. ಈ ಸಾಹಸ ದೃಶ್ಯವನ್ನು ರಾಮ್ ಲಕ್ಷ್ಮಣ್ ನಿರ್ದೇಶನ ಮಾಡುತ್ತಿದ್ದಾರೆ.ಸುಮಾರು ಹತ್ತು ದಿನಗಳಿಂದ ನಡೆಯುತ್ತಿರುವ ಈ ಸಾಹಸ ದೃಶ್ಯವನ್ನು ಚಿತ್ರೀಕರಣದಲ್ಲಿ ಮೂವರು ಕ್ಯಾಮೆರಾ ಮ್ಯಾನ್ ಗಳು ಕೆಲಸ ಮಾಡುತ್ತಿದ್ದಾರೆ. ಸ್ವಾಮಿ ಜೆ, ಗಿರೀಶ್ ಗೌಡ ಹಾಗೂ ರಾಮ್ ರೆಡ್ಡಿ, ನಿಖಿಲ್ ಅವರ ಸಾಹಸ ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯುತ್ತಿದ್ದಾರೆ. ಶೂಟಿಂಗ್ ನಲ್ಲಿ ಶರತ್ ಕುಮಾರ್, ರವಿಶಂಕರ್, ಆದಿತ್ಯ ಮೆನನ್, ಮಧುಬಾಲ, ಜ್ಯೋತಿ ರೈ, ಗಿರಿಜಾ ಲೋಕೇಶ್, ಚಿಕ್ಕಣ್ಣ, ಸಾಧು ಕೋಕಿಲ, ಕುರಿ ಪ್ರತಾಪ್, ಶಿವರಾಜ್ ಕೆ ಆರ್ ಪೇಟೆ, ಶಾಲಿನಿ ಮುಂತಾದವರು ತಾರಾಂಗಣದಲ್ಲಿದ್ದಾರೆ.
Comments