ಅಭಿನಯಚಕ್ರವರ್ತಿ ಚಾಲೆಂಜ್ ಗೆ ಟ್ವಿಸ್ಟ್ ಕೊಟ್ಟ ರಾಕಿಂಗ್ ಸ್ಟಾರ್..!!

ಕೇಂದ್ರ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋರ್ ಇತ್ತೀಚಿಗಷ್ಟೆ ಫಿಟ್ನೆಸ್ ಕುರಿತು ಹೊಸದೊಂದು ಅಭಿಯಾನ ಆರಂಭಿಸಿದ್ದರು. ಈ ಅಭಿಯಾನದ ಪರಿಣಾಮ ಸ್ಟಾರ್ ನಟ-ನಟಿಯರು ಹಾಗೂ ದೇಶದ ಗಣ್ಯ ವ್ಯಕ್ತಿಗಳು ಈ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ.
ಇದೀಗ ಸ್ಯಾಂಡಲ್ ವುಡ್ ನಲ್ಲೂ ‘ ಹಮ್ ಫಿಟ್ ತೋ ಇಂಡಿಯಾ ಫಿಟ್’ ಚಾಲೆಂಜ್ ಅನ್ನು ಈಗಾಗಲೇ ನಟ ಸುದೀಪ್, ನಟಿ ಸಂಯುಕ್ತಾ ಹೊರನಾಡು, ಲೂಸಿಯಾ ಪವನ್ ಕುಮಾರ್ ಹಾಗೂ ರಾಧಿಕಾ ಚೇತನ್ ಸ್ವೀಕರಿಸಿ ಚಾಲೆಂಜ್ ನಲ್ಲಿ ಗೆದ್ದಿದ್ದಾರೆ. ನಟ ಕಿಚ್ಚ ಸುದೀಪ್ ಹಾಕಿದ್ದ ಫಿಟ್ನೆಸ್ ಚಾಲೆಂಜ್ ಅನ್ನು ರಾಕಿಂಗ್ ಸ್ಟಾರ್ ಯಶ್ ಸ್ವೀಕರಿಸಿದ್ದಾರೆ. ಯಶ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಫಿಟ್ನೆಸ್ ವಿಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಈ ಮೂಲಕ ‘ಹಮ್ ಫಿಟ್ ತೋ ಇಂಡಿಯಾ ಫಿಟ್’ ಅಭಿಯಾನದಲ್ಲಿ ರಾಕಿಂಗ್ ಸ್ಟಾರ್ ಯಶ್ ಕೂಡ ಸೇರಿಕೊಂಡಿದ್ದಾರೆ. ಕಿಚ್ಚನ ಚಾಲೆಂಜ್ ಸ್ವೀಕರಿಸಿರುವ ಯಶ್ ಸಣ್ಣ ಟ್ವಿಸ್ಟ್ ಕೊಟ್ಟಿದ್ದಾರೆ. ಅದೇನು ಅಂತೀರಾ..ಹಾಗಾದ್ರೆ ಮುಂದೆ ಓದಿ.. ಯಶ್ ತಾವು ವರ್ಕ್ ಔಟ್ ಮಾಡುವ ಬದಲು ಚೇತನ್ ಎಂಬ ತಮ್ಮ ಬಾಲ್ಯ ಸ್ನೇಹಿತರೊಬ್ಬರಿಂದ ವರ್ಕ್ ಔಟ್ ಮಾಡಿಸಿದ್ದಾರೆ. ಆ ವಿಡಿಯೋ ನೋಡುವುದಕ್ಕೆ ಸಖತ್ ಫನ್ನಿಯಾಗಿದೆ. ನಾವು ಫಿಟ್ ಆಗುವುದರೊಂದಿಗೆ ನಮ್ಮ ಜೊತೆಗೆ ಇರುವವರನ್ನು ಫಿಟ್ ಆಗಿ ಇಡೋಣ ಎಂದಿದ್ದಾರೆ ಯಶ್.
Comments