ಡಿಂಪಲ್ ಕ್ವೀನ್ 'ಐ ಲವ್ ಯು' ಹೇಳಲು ರೆಡಿಯಾಗ್ತಿರೋದು ಯಾರಿಗ್ ಗೊತ್ತಾ?
ಬುಲ್ ಬುಲ್ ಚಿತ್ರದ ಮೂಲಕ ಸಿಕ್ಕಾಪಟ್ಟೆ ನೇಮು ಪೇಮು ಗಳಿಸಿದ ಡಿಂಪಲ್ ಕ್ವೀನ್ ರಚಿತಾ ರಾಮ್ ಮತ್ತೆ ಸ್ಟಾರ್ ನಟರ ಟ್ರ್ಯಾಕ್‌ಗೆ ಬರುತ್ತಿದ್ದಾರೆ ಅನಿಸುತ್ತಿದೆ. ಸ್ಟಾರ್ ನಟರ ಚಿತ್ರಗಳ ಮೂಲಕವೇ ಕನ್ನಡ ಚಿತ್ರರಂಗಕ್ಕೆ ಬಂದವರು. ಆದರೆ ನಡುವೆ ಒಂದಿಷ್ಟು ಅಂತಹ ಒಳ್ಳೆಯ ಅವಕಾಶಗಳು ಇಲ್ಲ ಎಂದುಕೊಳ್ಳುತ್ತಿರುವಾಗಲೇ ರಚಿತಾ ರಾಮ್ ಅವರ ತೆಕ್ಕೆಯಲ್ಲಿ ಐದು ಸಿನಿಮಾಗಳಿವೆ.
ರಿಯಲ್ ಸ್ಟಾರ್ ಉಪೇಂದ್ರ ಚಿತ್ರಕ್ಕೆ ಡಿಂಪಲ್ ಕ್ವೀನ್ ನಾಯಕಿ ಆಗಿದ್ದಾರೆ. ಆರ್ ಚಂದ್ರು ನಿರ್ದೇಶನದ, ಉಪೇಂದ್ರ ನಾಯಕನಾಗಿ ನಟಿಸಲಿರುವ 'ಐ ಲವ್ ಯು' ಚಿತ್ರಕ್ಕೆ ಡಿಂಪಲ್ ಹುಡುಗಿ ನಾಯಕಿ ಆಗಿದ್ದಾರೆ. ತೆಲುಗು ಹಾಗೂ ಕನ್ನಡ ಭಾಷೆಯಲ್ಲಿ ಮೂಡಿಬರಲಿರುವ ಚಿತ್ರವಾಗಿರುವ ಕಾರಣ ಎರಡೂ ಭಾಷೆಗೂ ಸೂಕ್ತ ಅನ್ನಿಸುವಂತಹ ನಾಯಕಿಯ ಹುಡುಕಾಟದಲ್ಲಿದ್ದರು ನಿರ್ದೇಶಕ ಆರ್ ಚಂದ್ರು. ಉಪ್ಪಿಗೆ ಐ ಲವ್ ಯು ಎನ್ನುವ ಭಾಗ್ಯಿದೀಗ ರಚಿತಾ ರಾಮ್ ಪಾಲಿಗೆ ಸಿಕ್ಕಿದೆ. ಇದೇ ತಿಂಗಳು 5 ರಿಂದ ಚಿತ್ರೀಕರಣ ಪ್ರಾರಂಭವಾಗಲಿದೆ. ಬೆಂಗಳೂರು, ಮಂಗಳೂರು, ಹೈದರಾಬಾದ್‌ನಲ್ಲಿ ಒಂದೇ ಹಂತದಲ್ಲಿ ಚಿತ್ರೀಕರಣ ನಡೆಯಲಿದೆ.ಅಷ್ಟೆ ಅಲ್ಲದೆ ಗುಜರಾತ್‌ನ ಮರಳುಗಾಡಿನಲ್ಲಿ ಒಂದು ಹಾಡಿನ ಚಿತ್ರೀಕರಣದ ಪ್ಲಾನ್ ಕೂಡ ಚಿತ್ರತಂಡ ಮಾಡಿಕೊಂಡಿದೆ.. ನವೀನ್ ಕ್ಯಾಮೆರಾ, ಡಾ ಕಿರಣ್ ಸಂಗೀತ ಸಂಯೋಜನೆ ಮಾಡಲಿದ್ದಾರೆ..ಇವರಿಬ್ಬರ ಕಾಂಬಿನೇಷನ್ ನಲ್ಲಿ ಈ ಚಿತ್ರ ಯಾವ ರೀತಿ ತೆರೆ ಮೇಲೆ ಮೂಡಿ ಬರಲಿದೆ ಅನ್ನೋದನ್ನ ಕಾದುನೋಡಬೇಕಿದೆ.
Comments