ಆಕ್ಷನ್ ಪ್ರಿನ್ಸ್ ಗೆ ಖಡಕ್ ವಾರ್ನಿಂಗ್ ಕೊಟ್ಟ ರೆಬಲ್ ಸ್ಟಾರ್..!

ಮಂಡ್ಯದ ಗಂಡು ಅಂಬರೀಶ್ ರಾಕಿಂಗ್ ಸ್ಟಾರ್ ಯಶ್ ಕ್ಲಾಸ್ ತೆಗೆದುಕೊಂಡಿದ್ದು ಎಲ್ಲರಿಗೂ ಗೊತ್ತು.. ಇದೀಗ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ರೆಬಲ್‍ಸ್ಟಾರ್ ಅಂಬರೀಷ್ ಸ್ಯಾಂಡಲ್ ವುಡ್ ನ ಮೊಸ್ಟ್ ಸೀನಿಯರ್ ಆಗಿರುವುದರಿಂದ ಇತ್ತಿಚಿನ ಕಲಾವಿದರಿಗೆ ಸಜೆಸ್ಟ್ ಮಾಡುವ ರೈಟ್ಸ್ ಅವರಿಗಿದೆ. ಇತ್ತೀಚೆಗೆ ರಾಕಿಂಗ್ ಸ್ಟಾರ್ ಯಶ್‍ಗೆ ಗಡ್ಡಕ್ಕೆ ಕತ್ತರಿ ಹಾಕಿಸಿಕೊಂಡು ಆಮೇಲೆ ನನ್ನ ಭೇಟಿ ಮಾಡುವಂತೆ ಖಡಕ್ ವಾರ್ನಿಂಗ್ ಮಾಡಿದ್ದರು. ಎಸ್.. ಅಂಬರೀಷ್ ಹುಟ್ಟುಹಬ್ಬಕ್ಕೆ ವಿಶ್ ಮಾಡಲು ಆಕ್ಷನ್ ಪ್ರಿನ್ಸ್ ಅಂಬರೀಷ್ ಮನೆಗೆ ಹೋಗಿದ್ದರು. ಆ ಸಮಯದಲ್ಲಿ ಧ್ರುವಾಗೆ ಅಂಬರೀಶ್ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಧ್ರುವ ಸರ್ಜಾ ಒಂದು ಸಿನಿಮಾಗೆ ಕಮಿಟ್ ಆದ ಮೇಲೆ ಮತ್ತೊಂದು ಸಿನಿಮಾಗೆ ಕೈಹಾಕಲ್ಲ. ಆದ್ದರಿಂದ ಎರಡು ವರ್ಷಕ್ಕೆ ಒಂದೊಂದು ಸಿನಿಮಾ ಮಾಡಿಕೊಂಡು ಕೂರಬೇಡಿ, ವರ್ಷಕ್ಕೆ ಎರಡು-ಮೂರು ಸಿನಿಮಾ ಮಾಡೋದನ್ನ ಕಲಿತಿಕೋ ಅಂತ ಅಂಬಿ ತಮ್ಮ ರೆಬಲ್ ಸ್ಟೈಲ್ ನಲ್ಲೇ ಧ್ರುವಾಗೆ ಖಡಕ್ ಆಗಿಯೇ ಹೇಳಿದ್ದಾರೆ.
Comments