ಹ್ಯಾಟ್ರಿಕ್ ಹೀರೋ ಜೊತೆ ಬರ್ತ್ ಡೇ ಸೆಲೆಬ್ರೇಟ್ ಮಾಡಿಕೊಂಡ ಬಿಗ್ ಬಾಸ್ ಸ್ಪರ್ಧಿ ಯಾರ್ ಗೊತ್ತಾ?



ಸಾಕಷ್ಟು ಹೆಸರು ಮಾಡಿರುವಂತ ರಿಯಾಲಿಟಿ ಷೋ ಗಳಲ್ಲಿ ಬಿಗ್ ಬಾಸ್ ಕೂಡ ಒಂದು. ಬಿಗ್ ಬಾಸ್ ಕನ್ನಡ 5ನೇ ಆವೃತ್ತಿಯ ರನ್ನರ್ ಅಪ್ ಸ್ಪರ್ಧಿ ಆಗಿದ್ದಂತಹ ದಿವಾಕರ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.
ತನ್ನ ಮಾತು, ತನ್ನಲ್ಲಿದ್ದ ಪ್ರತಿಭೆಯ ಮೂಲಕ ಕನ್ನಡಿಗರ ಮನಗೆದ್ದ ಸೇಲ್ಸ್ ಮ್ಯಾನ್ ದಿವಾಕರ್ ಅವರು ಇಂದು 29ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ವರ್ಷದ ಹುಟ್ಟುಹಬ್ಬವನ್ನ ಚಂದನವನದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೊತೆ ಸೆಲೆಬ್ರೆಟ್ ಮಾಡಿಕೊಂಡಿರುವುದು ವಿಶೇಷವಾಗಿದೆ. ಎಸ್, ಬರ್ತಡೇ ದಿನ ಶಿವಣ್ಣ ಅವರನ್ನ ಭೇಟಿ ಮಾಡಿದ ದಿವಾಕರ್, ಸೆಂಚುರಿ ಸ್ಟಾರ್ ಗೆ ಸಿಹಿ ತಿನಿಸಿ ಸಂಭ್ರಮ ಪಟ್ಟರು. ದಿವಾಕರ್ ಗೆ ಶಿವಣ್ಣ ಕೂಡ ಸ್ವೀಟ್ ತಿನಿಸಿ ಒಳ್ಳೆಯದಾಗಲಿ ಎಂದು ಶುಭಕೋರಿದರು.
Comments