ಮಾನ್ವಿತಾ ಮೊಬೈಲ್ ಸ್ಟೇಟಸ್ ನಲ್ಲಿ 'ಪಾಪ್ ಕಾರ್ನ್ ಮಂಕಿ ಟೈಗರ್' ದರ್ಬಾರ್

ಟಗರು ಸಿನಿಮಾದ ನಂತರ ಮಾನ್ವಿತಾ ಹರೀಶ್ ಸಿಕ್ಕಾಪಟ್ಟೆ ಫೇಮಸ್ ಆಗಿಬಿಟ್ಟಿದ್ದಾರೆ.ಈ ಚಿತ್ರದಲ್ಲಿ ಮಾನ್ವಿತಾ ನಾಯಕಿಯಾಗಿದ್ದಾರೆ.'ಪಾಪ್ ಕಾರ್ನ್ ಮಂಕಿ ಟೈಗರ್' ದುನಿಯಾ ಸೂರಿ ಹಾಗೂ ಧನಂಜಯ ಕಾಂಬಿನೇಶನ್ ನಲ್ಲಿ ಸೆಟ್ಟೇರಲು ಸಜ್ಜಾಗಿರುವಂತಹ ಸಿನಿಮಾ. ಟಗರು ಯಶಸ್ಸಿನಲ್ಲಿರುವ ನಿರ್ದೇಶಕ ಸೂರಿ ಹಾಗೂ ತಂಡಕ್ಕೆ ನಟಿ ಮಾನ್ವಿತಾ ಹರೀಶ್ ಹೊಸದೊಂದು ಗಿಫ್ಟ್ ನೀಡಿದ್ದಾರೆ.
ಮಾನ್ವಿತಾ ನೀಡಿರುವ ಈ ಉಡುಗೊರೆ ಚಿತ್ರ ಸೆಟ್ಟೇರುವ ಮುಂಚೆಯೇ ಜನರಿಗೆ ಸಿನಿಮಾ ಬಗ್ಗೆ ಸಿಕ್ಕಾಪಟ್ಟೆ ಕ್ಯೂರಿಯಾಸಿಟಿ ಕ್ರಿಯೆಟ್ ಮಾಡಿಸುವಂತಿದೆ. ಇತ್ತೀಚಿನ ದಿನಗಳಲ್ಲಿ ನಟಿ ಮಾನ್ವಿತಾ ಹರೀಶ್ ಎಲ್ಲರ ಫೇವರೆಟ್ ಆಗಿಬಿಟ್ಟಿದ್ದಾರೆ. ಸ್ವಲ್ಪ ಸಮಯ ಸಿಕ್ಕರೆ ಸಾಕು ಪೆನ್ಸಿಲ್ ಹಿಡಿದು ಪೇಪರ್ ಮೇಲೆ ಚಿತ್ತಾರಗಳನ್ನು ಮೂಡಿಸುತ್ತಿರುತ್ತಾರೆ. ಅದೇ ರೀತಿಯಲ್ಲಿ ದುನಿಯಾ ಸೂರಿ ನಿರ್ದೇಶನದ ಚಿತ್ರದ ಟೈಟಲ್ ಗೆ ತಕ್ಕಂತ ಡ್ರಾಯಿಂಗ್ ಮಾಡಿದ್ದು ಸದ್ಯ ಅವರ ವಾಟ್ಸ್ ಆಪ್ ಸ್ಟೇಟಸ್ ನಲ್ಲಿ ಪಾಪ್ ಕಾರ್ನ್ ಮಂಕಿ ಟೈಗರ್ ಸಖತ್ ಸದ್ದು ಮಾಡುತ್ತಿದೆ. ಮಾನ್ವಿತಾ ಮಾಡಿರುವ ಆರ್ಟ್ ಎಲ್ಲರಿಗೂ ಇಷ್ಟ ಆಗಿದ್ದು ಚಿತ್ರದ ಟೈಟಲ್ ನಲ್ಲಿ ಇದೇ ರೀತಿ ಇರುತ್ತಾ ಎನ್ನುವುದನ್ನ ಎಲ್ಲರೂ ಕಾದು ನೋಡಬೇಕಾಗಿದೆ.
Comments