ರಣಧೀರನಿಗೆ ಇಂದು 57 ನೇ ಹುಟ್ಟುಹಬ್ಬದ ಸಂಭ್ರಮ: ಹ್ಯಾಪಿ ಬರ್ತ್ ಡೇ ಕ್ರೇಜಿ ಸ್ಟಾರ್

ಸ್ಯಾಂಡಲ್ ವುಡ್ ನಲ್ಲಿ ಕನಸುಗಾರ ಎಂದರೆ ಎಲ್ಲರಿಗೂ ನೆನಪಾಗೋದು ವಿ.ರವಿಚಂದ್ರನ್ .ಇಂದು 57 ನೇ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳುತ್ತಿದ್ದಾರೆ.
ಇವರ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಕುಟುಂಬಸ್ಥರು, ಆತ್ಮೀಯರು, ಚಿತ್ರರಂಗದ ಗಣ್ಯರು ಶುಭಾಶಯ ಕೋರಿದರು. ಕನ್ನಡ ಚಿತ್ರರಂಗದಲ್ಲಿ ಪ್ರೇಮಲೋಕ ಚಿತ್ರದಿಂದ ಹೊಸ ಆಯಾಮವನ್ನೆ ಸೃಷ್ಟಿಸಿದ್ದ ರವಿಚಂದ್ರನ್ ಚಿತ್ರಗಳಲ್ಲಿ ತಾಂತ್ರಿಕತೆಯ ಕೌಶಲ್ಯ ಅಳವಡಿಸಿಕೊಳ್ಳುತ್ತ ಎಲ್ಲರ ಗಮನವನ್ನು ಸೆಳೆದವರು. ಪ್ರೀತಿ-ಪ್ರೇಮದ ಕಥೆಯಾಧಾರಿತ ಚಿತ್ರಗಳಷ್ಟೇ ಅಲ್ಲದೆ ಮನೆದೇವ್ರು, ಪುಟ್ನಂಜ, ಏಕಾಂಗಿಯಂತಹ ವಿಭಿನ್ನ ರೀತಿಯ ಚಿತ್ರಗಳನ್ನು ಕನ್ನಡ ಪ್ರೇಕ್ಷಕರಿಗೆ ನೀಡಿದವರು.
Comments