ರಾಕಿಂಗ್ ಸ್ಟಾರ್ ಅಭಿಮಾನಿಗಳಿಗೆ ಗುಡ್ ನ್ಯೂಸ್..!
ಸ್ಯಾಂಡಲ್ ವುಡ್ ನಲ್ಲಿ ಭಾರೀ ಹೆಚ್ಚು ಕುತೂಹಲ ಮೂಡಿಸಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರದ ಟ್ರೇಲರ್ ಯಾವಾಗ ಎಂದು ಕಾಯುತ್ತಿದ್ದ ಅಭಿಮಾನಿಗಳಿಗೆ ಚಿತ್ರತಂಡ ಗುಡ್ ನ್ಯೂಸ್ ನೀಡಿದೆ.
ಎಸ್…,ಸ್ಯಾಂಡಲ್ ವುಡ್ ನಲ್ಲಿ ಬಾರಿ ಸದ್ದು ಮಾಡುತ್ತಿರುವ ಸದ್ಯಕ್ಕೆ ಬಂದಿರುವ ಪ್ರಕಾರ ಕೆಜಿಎಫ್ ಚಿತ್ರದ ಚಿತ್ರೀಕರಣ ಮುಗಿದ್ದಿದ್ದು, ಡಬ್ಬಿಂಗ್ ಕಾರ್ಯ ಆರಂಭವಾಗಿದೆ. ಹಿರಿಯ ನಟರಾದ ಅನಂತ್ ನಾಗ್ ಭಾಗದ ಸಂಪೂರ್ಣವಾದ ಚಿತ್ರೀಕರಣದೊಂದಿಗೆ ಪ್ರೋಡಕ್ಷನ್ ಹಂತವೂ ಕೂಡ ಮುಗಿದಿದ್ದು, ಎಡಿಟಿಂಗ್ ಕೆಲಸ ಕೂಡ ಪ್ರಾರಂಭವಾಗಿದೆ ಎಂದು ಚಿತ್ರ ತಂಡ ಹೇಳಿದೆ. ಆಗಸ್ಟ್ ನಂತರ ಈ ಚಿತ್ರವನ್ನು ಬಿಡುಗಡೆ ಮಾಡಲಾಗುವುದು ಎಂದು ಚಿತ್ರದ ನಿರ್ದೇಶಕರಾದ ಪ್ರಶಾಂತ್ ನೀಲ್ ಹೇಳಿದ್ದಾರೆ. ನಂತರ ಕೆಜಿಎಫ್ 2 ರ ಚಿತ್ರೀಕರಣ ಪ್ರಾರಂಭವಾಗಲಿದೆ. ಇನ್ನೂ ಈ ಸಿನಿಮಾ ತೆರೆ ಮೇಲೆ ಯಾವ ರೀತಿ ಮೂಡಿಬರಲಿದೆ ಅನ್ನೋದನ್ನ ಕಾದುನೋಡಬೇಕಿದೆ.
Comments