ರೆಬಲ್ ಸ್ಟಾರ್ ಹುಟ್ಟುಹಬ್ಬಕ್ಕೆ ಮೊದಲ ಗಿಫ್ಟ್ ಕೊಟ್ಟ ಚಾಲೆಂಜಿಂಗ್ ಸ್ಟಾರ್
ಸ್ಯಾಂಡಲ್ ವುಡ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ತುಂಬಾ ಇಷ್ಟ ಪಡೋದು ಯಾರನ್ನ ಗೊತ್ತಾ? ಅದು ಮಂಡ್ಯದ ಗಂಡು,ರೆಬಲ್ ಸ್ಟಾರ್ ಅಂಬರೀಶ್, ಅಂಬರೀಶ್ ಅವರ 66 ನೇ ವರ್ಷದ ಹುಟ್ಟುಹಬ್ಬಕ್ಕೆ ಪ್ರತಿ ವರ್ಷದಂತೆ ಈ ವರ್ಷವೂ ಮೊದಲ ಗಿಫ್ಟ್ ಹಾಗೂ ಮೊದಲ ಕೇಕ್ ಚಾಲೆಂಜಿಂಗ್ ಸ್ಟಾರ್ ಅವರದ್ದೇ.
ಚಾಲೆಂಜಿಂಗ್ ಸ್ಟಾರ್ ಅಂಬರೀಶ್ ಅವರಿಗಾಗಿ ವಿಶೇಷವಾಗ ಕೇಕ್ ಅನ್ನು ರೆಡಿ ಮಾಡಿಸಿಕೊಂಡು ತಂದಿದ್ದಾರೆ. ಆದರೆ ಅದು ಯಾವ ರೀತಿ ಕೇಕ್ ಎನ್ನುವ ವಿಷಯವನ್ನು ಸುಮಲತಾ ಬಿಟ್ಟುಕೊಟ್ಟಿಲ್ಲ. ಟ್ವಿಟ್ಟರ್ ನಲ್ಲಿ ಈ ಬಗ್ಗೆ ಫೋಟೋ ಅಪ್ಲೋಡ್ ಮಾಡಿದ್ದು ಕೇಕ್ ಫೋಟೋ ಮಾತ್ರ ಬ್ಲರ್ ಮಾಡಿ ಬಿಟ್ಟಿದ್ದಾರೆ.ಇನ್ನು ಗಿಫ್ಟ್ ಗಳ ಬಾಕ್ಸ್ ಫೋಟೋಗಳು ಇದ್ದು ವಿಶೇಷವಾಗಿರುವುದನ್ನೇ ನೀಡಿರುತ್ತಾರೆ ಎನ್ನುವುದಂತು ಕನ್ಫರ್ಮ್ ಮಾಡಿದ್ದಾರೆ. ನಿನ್ನೇ ಮಧ್ಯರಾತ್ರಿಯೇ ಮನೆಗೆ ಭೇಟಿ ನೀಡಿ ದರ್ಶನ್ ಕೇಕ್ ಕಟ್ ಮಾಡಿಸಿ ರೆಬೆಲ್ ಸ್ಟಾರ್ ಗೆ ಹುಟ್ಟುಹಬ್ಬದ ಶುಭಾಶಯವನ್ನು ತಿಳಿಸಿದ್ದಾರೆ.
Comments