ಹುಟ್ಟು ಹಬ್ಬದ ಸಂಭ್ರಮದಲ್ಲಿ ರೆಬಲ್ ಸ್ಟಾರ್: ಅಭಿಮಾನಿಗಳ ಜೊತೆ ಮಂಡ್ಯದ ಗಂಡಿನ ಬರ್ತ್ ಡೇ ಸೆಲಬ್ರೇಷನ್

ಮಂಡ್ಯದ ಗಂಡು ಅಂಬರೀಶ್ ಇಂದು ತಮ್ಮ 66ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಅಭಿಮಾನಿಗಳ ಜೊತೆಗೆ ರೆಬಲ್ ಸ್ಟಾರ್ ತಮ್ಮ ಹುಟ್ಟು ಹಬ್ಬದ ಸಂಭ್ರಮವನ್ನು ಹಂಚಿಕೊಂಡಿದ್ದಾರೆ. ನಿನ್ನೆ ರಾತ್ರಿಯಿಂದಲೇ ಅವರ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.
ನಿನ್ನೆ ರಾತ್ರಿ ಅಂಬರೀಶ್ ಅವರ ಸಾಕಷ್ಟು ಅಭಿಮಾನಿಗಳು ಜೆಪಿ ನಗರದ ಅವರ ನಿವಾಸಕ್ಕೆ ಬಂದು ದೊಡ್ಡ ಕೇಕ್, ಹೂವಿನ ಹಾರ ತಂದು ತಮ್ಮ ಪ್ರೀತಿಯ ರೆಬಲ್ ಸ್ಟಾರ್ ನ ಹುಟ್ಟುಹಬ್ಬವನ್ನು ಆಚರಿಸಿದರು. ಫ್ಯಾನ್ಸ್ ತಂದ ಕೇಕ್ ಕಟ್ ಮಾಡಿ, ಅವರ ಸೆಲ್ಫಿಗೆ ಫೋಸ್ ಕೊಟ್ಟು ಖುಷಿಯಿಂದ ಅಂಬಿ ಕಾಲವನ್ನು ಕಳೆದರು. ಅಂಬಿ ಅವರ ಈ ವರ್ಷದ ಹುಟ್ಟುಹಬ್ಬ ಸಾಕಷ್ಟು ವಿಶೇಷತೆಗಳಿಂದ ಕೂಡಿದೆ. ಬರ್ತ್ ಡೇ ವಿಶೇಷವಾಗಿ ಅವರ 'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರದ ಟೀಸರ್ ಕೂಡ ಬಿಡುಗಡೆಯಾಗಿದೆ. ಈ ಚಿತ್ರದ ಮೂಲಕ ಬಹಳ ವರ್ಷಗಳ ನಂತರ ಅಂಬರೀಶ್ ಮತ್ತೆ ಹೀರೋ ಆಗಿ ತೆರೆ ಮೇಲೆ ಮಿಂಚಲಿದ್ದಾರೆ.
Comments