'ಅಪ್ಪು' 'ಅದ್ದೂರಿ' 'ಅಮರ್'..: 'ಅ' ಅಕ್ಷರದ ಹಿಂದಿದ್ಯಾ ಬಿಗ್ ಸಿಕ್ರೇಟ್..!

ಅಭಿಷೇಕ್ ಅಂಬರೀಶ್ ಅಭಿನಯದ ಚೊಚ್ಚಲ ಚಿತ್ರ ‘ಅಮರ್'. ರೆಬೆಲ್ ಸ್ಟಾರ್ ಅಂಬರೀಶ್ ಅವರ ಪುತ್ರ ಈ ಸಿನಿಮಾದ ಮೂಲಕ ಕನ್ನಡ ಸಿನಿಮಾರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.
ಅಪ್ಪನ ಚಿತ್ರದ ಹೆಸರನ್ನು ಮಗನ ಚಿತ್ರಕ್ಕೆ ಟೈಟಲ್ ಆಗಿ ಮಾಡಿರುವುದೇಕೆ ಎನ್ನುವುದರ ಹಿಂದೆ ಗುಟ್ಟೊಂದಿದೆ. ಹೌದು ಅ ಅಕ್ಷರ ಸಿನಿಮಾರಂಗದಲ್ಲಿ ಸಾಕಷ್ಟು ಹೀರೋಗಳಿಗೆ ಅದೃಷ್ಟ ಎನ್ನುವುದು ಸಿನಿಮಾಮಂದಿಯ ನಂಬಿಕೆಯಂತೆ. ಅದಕ್ಕಾಗಿಯೇ ಅಮರ್ ಎನ್ನುವ ಟೈಟಲ್ ಇಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಶಿವರಾಜ್ ಕುಮಾರ್ ಅಭಿನಯದ ಮೊದಲ ಚಿತ್ರ 'ಆನಂದ್', ಪುನೀತ್ ರಾಜ್ ಕುಮಾರ್ ಅಭಿನಯದ ಮೊದಲ ಸಿನಿಮಾ 'ಅಪ್ಪು'. ಅಷ್ಟೇ ಅಲ್ಲದೆ ಧ್ರುವ ಸರ್ಜಾ ಅಭಿನಯದ ಫಸ್ಟ್ ಚಿತ್ರದ ಟೈಟಲ್ ಕೂಡ 'ಅದ್ದೂರಿ' ಈ ಎಲ್ಲಾ ಹೀರೋಗಳು ಯಶಸ್ಸು ಕಂಡಂತೆ ಅಭಿಷೇಕ್ ಅಂಬರೀಶ್ ಕೂಡ ಚಿತ್ರರಂಗದಲ್ಲಿ ಭರವಸೆಯ ನಾಯಕನಾಗಿ ಉಳಿದುಕೊಳ್ಳಲಿ ಚಿತ್ರತಂಡದ ಆಶಯ.
Comments