ವಸಿಷ್ಠ. ಎನ್ ಸಿಂಹನ ಎಂಟು ಅವತಾರ…! ಯಾವುದು ಆ ಚಿತ್ರ?
ಗಡಸು ಧ್ವನಿಯಿಂದ ಮತ್ತು ಅಮೋಘ್ನ ನಟನೆಯಿಂದ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟ ಎಂದರೆ ಅದು ವಸಿಷ್ಠ ಎನ್ ಸಿಂಹ. ಚಿತ್ರರಂಗಕ್ಕೆ ಬಂದು ಏನಿಲ್ಲಾ ಅಂದ್ರೂ ಸುಮಾರು ಆರು ವರ್ಷಗಳು ಕಳೆದಿದೆ. 12ಕ್ಕೂ ಹೆಚ್ಚು ಚಿತ್ರದಲ್ಲಿ ಅಭಿನಯಿಸಿರುವ ವಸಿಷ್ಠ ಪ್ರತಿ ಸಿನಿಮಾದಲ್ಲಿಯೂ ಕೂಡ ವಿಭಿನ್ನವಾಗಿರುವ ಪಾತ್ರವನ್ನೇ ಆಯ್ಕೆ ಮಾಡಿಕೊಳ್ಳುತ್ತಾ ಬಂದಿದ್ದಾರೆ.
ವಸಿಷ್ಠ ಈಗ ಎಂಟು ಅವತಾರದಲ್ಲಿ ಪ್ರೇಕ್ಷಕರ ಮುಂದೆ ಕಾಣಿಸಿಕೊಳ್ಳಲು ರೆಡಿಯಾಗಿದ್ದಾರೆ.. ಸುಮಂತ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಕಾಲಚಕ್ರ ಚಿತ್ರದಲ್ಲಿ ವಸಿಷ್ಟ ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ. ಚಿತ್ರದ ಫಸ್ಟ್ ಲುಕ್ ನಿಂದಲೇ ಸಖತ್ ಕ್ಯೂರಿಯಾಸಿಟಿ ಕ್ರಿಯೆಟ್ ಮಾಡಿರುವ ಕಾಲಚಕ್ರ ಚಿತ್ರತಂಡ ಸದ್ಯ ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದೆ.ಮೋಷನ್ ಪೋಸ್ಟರ್ ಮೂಲಕ ಈಗಾಗಲೇ ಇರುವ ಕುತೂಹಲವನ್ನು ದುಪ್ಪಟ್ಟು ಮಾಡಿರುವ ಕಾಲಚಕ್ರ ಚಿತ್ರತಂಡ ಕಾಲಬದಲಾದಂತೆ ಮನುಷ್ಯ ಆಯಾ ಸಂದರ್ಭಕ್ಕೆ ತಕ್ಕಂತೆ ವರ್ತಿಸಬೇಕಾಗುತ್ತದೆ ಎನ್ನುವುದನ್ನು ಮೋಷನ್ ಪೋಸ್ಟರ್ ಮೂಲಕ ಹೇಳುವಂತಿದೆ.ರಶ್ಮಿ ಫಿಲ್ಮ್ಸ್ ನಿರ್ಮಾಣದಲ್ಲಿ ತಯಾರಾಗಿರುವ ಕಾಲಚಕ್ರ ಚಿತ್ರವನ್ನು ಸುಮಂತ್ ನಿರ್ದೇಶನ ಮಾಡಿದ್ದಾರೆ. ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿ ಆಗಿರುವ ಚಿತ್ರತಂಡ ಜೂನ್ ಅಥವಾ ಜುಲೈನಲ್ಲಿ ಸಿನಿಮಾವನ್ನು ತೆರೆಗೆ ತರುವ ಪ್ರಯತ್ನದಲ್ಲಿದೆ.
Comments