ಪರಿಸರ ಸಂರಕ್ಷಣೆಗೆ ಟೊಂಕ ಕಟ್ಟಿ ನಿಂತ ಚಾಲೆಂಜಿಂಗ್ ಸ್ಟಾರ್..!

26 May 2018 3:16 PM | Entertainment
645 Report

ಚಾಲೆಂಜಿಂಗ್ ಸ್ಟಾರ್ ದರ್ಶನ್, ಚಿತ್ರರಂಗದಲ್ಲಿ ಸಾಕಷ್ಟು ಹೆಸರನ್ನು ಮಾಡಿದ್ದಾರೆ. ಪ್ರಾಣಿ-ಪಕ್ಷಿಗಳ ಕಾಳಜಿ ಜೊತೆಯಲ್ಲಿಯೇ ಸುತ್ತ-ಮುತ್ತ ಇರುವ ಪರಿಸರವನ್ನು ಸುಂದರವಾಗಿ ನೋಡಿಕೊಳ್ಳಬೇಕು ಮತ್ತು ಅದನ್ನು ಕಾಪಾಡಿಕೊಳ್ಳಬೇಕೆಂಬ ಹಂಬಲವಿರುವ ನಟ.

ಎಲ್ಲರಿಗೂ ತಿಳಿದಿರುವಂತೆ ಜೂನ್ ತಿಂಗಳಲ್ಲಿ ಪರಿಸರ ದಿನಾಚರಣೆ ಇದೆ. ಅದೇ ನಿಟ್ಟಿನಲ್ಲಿ ದರ್ಶನ್  ವೃಕ್ಷ ಮಾತೆಯ ಉಳಿವಿಗಾಗಿ ಮುಂದಾಗಿದ್ದಾರೆ.  ನಟ ದರ್ಶನ್ ಈ ಬಾರಿಯ ಪರಿಸರ ದಿನಾಚರಣೆಯ ಅಂಗವಾಗಿ ಅಭಿಮಾನಿಗಳು ಹಾಗೂ ನಾಡಿನ ಜನತೆಯಲ್ಲಿ ವಿಶೇಷವಾದ ಮನವಿಯೊಂದನ್ನು ಮಾಡಲಿದ್ದಾರೆ. ಸುತ್ತ-ಮುತ್ತಲಿನ ಪರಿಸರ ಹಾಗೂ ಮರಗಳನ್ನು ಉಳಿಸಿ ಎಂದು ಕರೆ ಕೊಡುತ್ತಿದ್ದಾರೆ. ಅರಣ್ಯ ಇಲಾಖೆಯಿಂದ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಈಗಾಗಲೇ ಮರಗಳನ್ನು ಉಳಿಸಿ ಎನ್ನವ ಸಂದೇಶ ಇರುವ ವಿಡಿಯೋವನ್ನು ದರ್ಶನ್ ಅವರಿಂದ ಪಡೆಯಲಾಗಿದೆ ಎಂದು ಹೇಳಲಾಗುತ್ತಿದೆ. ಅದನ್ನು ಜೂನ್ 5 ರಂದು ಬಿಡುಗಡೆ ಮಾಡಲಿದ್ದಾರಂತೆ. ಅರಣ್ಯ ಇಲಾಖೆಯಿಂದ ಪರಿಸರ ಕಾಳಜಿ ಇಂದಿನ ಕಾಲದಲ್ಲಿ ಎಷ್ಟು ಮುಖ್ಯ ಎನ್ನುವುದನ್ನು ಎಲ್ಲರಿಗೂ ತಲಿಪಿಸುವ ನಿಟ್ಟಿನಲ್ಲಿ ದರ್ಶನ್  ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ.

 

Edited By

Manjula M

Reported By

Manjula M

Comments