ಬಾಲಿವುಡ್ ನಟಿಯ ಮಗನ ಬರ್ತ್ ಡೇ ಗೆ ಲಂಡನ್ ನಿಂದ ಬಂತು ಶುಗರ್ ಫ್ರೀ ಲಾಲಿಪಾಪ್..!

ಫಿಟ್ನೆಸ್ ಗೆ ಅಂದ್ರೆ ನಮಗೆ ನೆನಪಾಗೋದು ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ. ವಯಸ್ಸಾದ್ರೂ ಕೂಡ ದೇಹ ಸೌಂದರ್ಯ ಕಾಪಾಡಿಕೊಂಡಿರುವ ಶಿಲ್ಪಾ ಶೆಟ್ಟಿ ಆಗಾಗ ಯೋಗ ಹಾಗೂ ವ್ಯಾಯಾಮದ ವಿಡಿಯೋಗಳನ್ನು ವೈರಲ್ ಮಾಡುತ್ತಿರುತ್ತಾರೆ. ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವ ಶಿಲ್ಪಾ, ಮಗ ವಿಯಾನ್ ಜನ್ಮದಿನದಂದು ಎಲ್ಲರಿಗೂ ಶುಗರ್ ಫ್ರೀ ಪಾರ್ಟಿಯನ್ನು ನೀಡಿದ್ದಾಳೆ.
ಶಿಲ್ಪಾ ಶೆಟ್ಟಿಯ ಮಗ ವಿಯಾನ್ ಮೇ 21 ರಂದು 6 ವರ್ಷಕ್ಕೆ ಕಾಲಿಟ್ಟಿದ್ದಾನೆ. ಶುಕ್ರವಾರ ಶಿಲ್ಪಾ ಸ್ನೇಹಿತರಿಗೆ ಶುಗರ್ ಫ್ರೀ ಪಾರ್ಟಿಯನ್ನು ನೀಡಿದ್ದಾಳೆ. ಬರ್ತ್ ಡೇ ಪಾರ್ಟಿಯಲ್ಲಿ ಶಿಲ್ಪಾ ಹಲವು ರೀತಿಯ ಆಹಾರಗಳನ್ನು ಮೆನುವಿನಲ್ಲಿ ಸೇರಿಸಿದ್ದಳು. ಬರ್ತಡೇ ಕೇಕನ್ನು ತೆಂಗಿನ ಹಾಲಿನಿಂದ ಮಾಡಲಾಗಿತ್ತು. ಫ್ರೂಟ್ ಲೊಲ್ಲಿಜ್ ಮತ್ತು ಯಾಕುಲ್ಟ್ ತರಿಸಿದ್ದಳು. ಮಗನ ಬರ್ತ್ ಡೇಯನ್ನು ವಿಭಿನ್ನವಾಗಿ ಆಚರಿಸುತ್ತಿದ್ದೇನೆ. ಪಾರ್ಟಿಯಲ್ಲಿ ಸಂಸ್ಕರಿಸಿದ ಸಕ್ಕರೆ ಇಲ್ಲದ ಆಹಾರವನ್ನು ತರಿಸಿದ್ದೇನೆ. ಲಂಡನ್ ನಿಂದ ಲಾಲಿಪಾಪ್ ತರಿಸಿದ್ದೇನೆ. ಅದನ್ನು ಶುದ್ಧ ಹಣ್ಣಿನಿಂದ ಮಾಡಲಾಗಿದೆ. ತೆಂಗಿನಕಾಯಿ ಹಾಲು ಹಾಗೂ ಜೇನುತುಪ್ಪ ಬಳಸಿ ಕೇಕ್ ತಯಾರಿಸಿದ್ದೇನೆ ಎಂದು ಶಿಲ್ಪಾ ತಿಳಿಸಿದ್ದಾರೆ. ಮಕ್ಕಳ ಆರೋಗ್ಯವನ್ನು ಯಾವ ರೀತಿ ನೋಡಿಕೊಳ್ಳಬೇಕು ಎಂದು ತಿಳಿದ ಶಿಲ್ಪ ಇಷ್ಟೆಲ್ಲಾ ವ್ಯವಸ್ಥೆ ಮಾಡಿದ್ದಾಳೆ.
Comments