ರೆಬೆಲ್ ಸ್ಟಾರ್ ಸನ್ ಗೆ ಸ್ವಾಗತ ಕೋರಿದ ಸ್ಯಾಂಡಲ್ ವುಡ್..!
ರೆಬಲ್ ಸ್ಟಾರ್ ಅಂಬರೀಶ್ ಪುತ್ರ ಸ್ಯಾಂಡಲ್ ವುಡ್ ಗೆ ಎಂಟ್ರ ಕೊಡ್ತಿರೋದು ಎಲ್ಲರಿಗೂ ಗೊತ್ತಿರುವ ವಿಚಾರ. ನಿನ್ನೆಯಷ್ಟೇ ಅಭಿಷೇಕ್ ಅಭಿನಯದ ಅಮರ್ ಚಿತ್ರದ ಮೊದಲ ಪೋಸ್ಟರ್ ರಿಲೀಸ್ ಆಗಿದೆ.
ಅಭಿಷೇಕ್ ಅಭಿನಯದ ರೆಬಲ್ ಚಿತ್ರದ ಫಸ್ಟ್ ಲುಕ್ ನೋಡಿ ಅಭಿಮಾನಿಗಳು ಖುಷಿಯನ್ನು ವ್ಯಕ್ತಪಡಿಸುತ್ತಿದ್ದಾರೆ. ಅಭಿಷೇಕ್ ಕೂಡ ಸಿನಿಮಾರಂಗದಲ್ಲಿ ನಾಯಕನಾಗಲು ಬೇಕಿರುವ ಎಲ್ಲ ರೀತಿಯ ತಯಾರಿಯನ್ನು ಈಗಾಗಲೇ ಮಾಡಿಕೊಂಡಿದ್ದಾರೆ. ಅಭಿಷೇಕ್ ಫಸ್ಟ್ ಲುಕ್ ನ ಪೋಸ್ಟರ್ ನೋಡಿದ ತಕ್ಷಣ ಅಭಿಮಾನಿಗಳ ಜೊತೆಗೆ ಕನ್ನಡ ಸಿನಿಮಾರಂಗದ ಕಲಾವಿದರು ಹಾಗೂ ತಂತ್ರಜ್ಞರು ಅಭಿಷೇಕ್ ಅವರಿಗೆ ಸ್ಯಾಂಡಲ್ ವುಡ್ ಗೆ ಸ್ವಾಗತವನ್ನು ಕೋರಿದ್ದಾರೆ. ಇನ್ನು ನಿರ್ದೇಶಕ ಹಾಗೂ ನಿರ್ಮಾಪಕ ಶಶಾಂಕ್ ಕೂಡ ಅಭಿಷೇಕ್ ಅವರ ಚಿತ್ರ ಫಸ್ಟ್ ಲುಕ್ ನೋಡಿ ಸಂತಸವನ್ನು ವ್ಯಕ್ತಪಡಿಸಿದ್ದು ತಂದೆ ತಾಯಿಗೆ ತಕ್ಕ ಮಗನಾಗು ಎಂದು ಟ್ವೀಟ್ ಮಾಡುವ ಮೂಲಕ ಶುಭವನ್ನು ಕೋರಿದ್ದಾರೆ.
Comments