ಚಕ್ರವರ್ತಿಯೊಂದಿಗೆ ರಾಧಿಕಾ ಕುಮಾರಸ್ವಾಮಿಯ 'ಕಾಂಟ್ರ್ಯಾಕ್ಟ್' ರೊಮ್ಯಾನ್ಸ್..!

ಸ್ಯಾಂಡಲ್ ವುಡ್ ಗೆ ಕಮ್ ಬ್ಯಾಕ್ ಮಾಡಿರುವ ರಾಧಿಕಾ, ಸಿನಿಮಾದ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ . ಅರ್ಜುನ್ ಸರ್ಜಾ ಅವರೊಂದಿಗೆ ರಾಧಿಕಾ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಈ ಚಿತ್ರ ಅಭಿಮಾನಿಗಳಲ್ಲಿ ಈಗಾಗಲೇ ಸಾಕಷ್ಟು ನಿರೀಕ್ಷೆಗಳನ್ನು ಮೂಡಿಸಿದೆ.
ಈ ಚಿತ್ರದ ಮತ್ತೊಂದು ವಿಶೇಷತೆ ಎಂದರೆ ರಾಮ್ ಗೋಪಾಲ್ ವರ್ಮಾ ಗರಡಿಯಲ್ಲಿ ಬೆಳೆದಂತಹ ತೆಲುಗಿನ ಖ್ಯಾತ ನಟ ಜೆ.ಡಿ.ಚಕ್ರವರ್ತಿಯೂ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ರಾಧಿಕಾ ಹಾಗೂ ಚಕ್ರವರ್ತಿ ಇರುವ ಫೋಟೋಗಳು ಈಗಾಗಲೇ ಸುದ್ದಿ ಮಾಡಿದ್ದು, ಚಿತ್ರದ ಬಗೆಗಿನ ಕುತೂಹಲವನ್ನು ಮತ್ತಷ್ಟು ಹೆಚ್ಚಾಗಿದೆ. ಚಕ್ರವರ್ತಿ ನಟಿಸುತ್ತಿರುವ ಮೊದಲ ಕನ್ನಡ ಚಿತ್ರ ಇದಾಗಿದ್ದು ತೆರೆ ಮೇಲೆ ಯಾವ ರೀತಿ ಮೂಡಿ ಬರುತ್ತೆ ಅನ್ನೋದನ್ನ ಕಾದು ನೋಡಬೇಕು.
Comments