ಶಿವಣ್ಣ-ಕಿಚ್ಚನ ಅಭಿಮಾನಿಗಳಿಗೆ ಗುಡ್ ನ್ಯೂಸ್ …!!

ಕರುನಾಡಚಕ್ರವರ್ತಿ ಶಿವಣ್ಣ ಹಾಗು ಅಭಿನಯಚಕ್ರವರ್ತಿ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಕಾದಿದೆ ಗುಡ್ ನ್ಯೂಸ್... ಏನು ಅಂತೀರಾ?.. ಹಾಗಾದ್ರೆ ಮುಂದೆ ಓದಿ… ದಿ ವಿಲನ್ ಟೀಸರ್ ಯಾವಾಗ.? ಇಂತಹ ಪ್ರಶ್ನೆ ಅಭಿಮಾನಿಗಳನ್ನು ಬಹಳ ಚಿಂತೆಗೀಡು ಮಾಡಿತ್ತು. ಈಗ ಕಾಲ ಕೂಡಿ ಬಂದಿದ್ದು, ವಿಲನ್ ಟೀಸರ್ ನೋಡುವ ಭಾಗ್ಯ ಅಭಿಮಾನಿಗಳಿಗೆ ಸದ್ಯದಲ್ಲೇ ಸಿಗಲಿದೆ.
ದಿ ವಿಲನ್ ಟೀಸರ್ ಯಾವಾಗ ಬರುತ್ತೋ ಎಂದು ಶಿವಣ್ಣ-ಸುದೀಪ್ ಅಭಿಮಾನಿಗಳು ಕಾತುರದಿಂದ ಕಾದು ಕುಂತಿದ್ದಾರೆ. ಈಗ ಬರುತ್ತೆ.ಆಗ ಬರುತ್ತೆ ಎಂದು ಹೇಳಿದ ಪ್ರೇಮ್ ಇದುವರೆಗೂ ಕೂಡ ಟೀಸರ್ ರಿಲೀಸ್ ಮಾಡಿಯೇ ಇಲ್ಲ. ಇನ್ನೂ, ಡಾ. ರಾಜಕುಮಾರ್ ಹುಟ್ಟು ಹಬ್ಬಕ್ಕೆ ದಿ ವಿಲನ್ ಟೀಸರ್ ರಿಲೀಸ್ ಆಗಲಿದೆ ಎಂದು ಕಾದು ಕುಳಿತ ಅಭಿಮಾನಿಗಳಿಗೆ ಪ್ರೇಮ್ ನಿರಾಸೆ ಮೂಡಿಸಿದರು. ಸಾಕಷ್ಡು ದಿನದಿಂದ ಕಾದಿದ್ದ ಅಭಿಮಾನಿಗಳಿಗೆ ದಿ ವಿಲನ್ ಟೀಸರ್ ರಿಲೀಸ್ ಆಗುವ ಡೇಟ್ ಪಕ್ಕಾ ಆಗಿದೆ. ಇದೆ ಜೂನ್ ಮೊದಲ ವಾರದಲ್ಲಿ ಶಿವರಾಜ್ ಕುಮಾರ್-ಸುದೀಪ್ ನಟನೆಯ ದಿ ವಿಲನ್ ಟೀಸರ್ ರಿಲೀಸ್ ಆಗಲಿದೆ. ಅಲ್ಲದೇ ಸಿನಿಮಾದ ಹಾಡುಗಳು ಕೂಡ ಅದೇ ತಿಂಗಳು ರಿಲೀಸ್ ಆಗುತ್ತಿರುವುದು ಸಂತಸದ ವಿಷಯ.
Comments