ರೆಬಲ್ ಸ್ಟಾರ್, ರಾಕಿಂಗ್ ಸ್ಟಾರ್ ಮೇಲೆ ರೆಬಲ್ ಆಗಿ ವಾರ್ನಿಂಗ್ ಮಾಡಿದ್ಯಾಕೆ ಗೊತ್ತಾ?

ರಾಕಿಂಗ್ ಸ್ಟಾರ್ ಮೇಲೆ ರೆಬಲ್ ಸ್ಟಾರ್ ಏಕಾಏಕಿ ಸಿಟ್ಟಿಗೆದಿದ್ದಾರೆ.. ಕೆಜಿಎಫ್ ಚಿತ್ರಕ್ಕಾಗಿ ಯಶ್ ಗಡ್ಡ ಬಿಟ್ಟಿರೋದು ಎಲ್ಲರಿಗೂ ಗೊತ್ತೆ ಇದೆ. ಅದನ್ನು ತೆಗೆಯುವಂತೆ ಅಂಬರೀಶ್ ಯಶ್ ಅವರಿಗೆ ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ.
ಯಶ್ ಯಾವಾಗಲೂ ಕ್ಲೀನ್ ಶೇವ್ ಲುಕ್‍ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ…ಈಗ ಕೆಜಿಎಫ್ ಸಿನಿಮಾಗಾಗಿ ಸ್ಟೈಲಿಶ್ ಆಗಿ ಗಡ್ಡ ಮೀಸೆ ಬಿಟ್ಟು ಕ್ಯಾಮೆರಾ ಮುಂದೆ ಕಾಣಿಸಿಕೊಳ್ಖುತ್ತಿದ್ದಾರೆ. ಯಶ್ ಅವರನ್ನು ಗಡ್ಡದಲ್ಲಿ ನೋಡಿ ಅಂಬರೀಷ್ ಅವರಿಗೆ ಸಿಕ್ಕಾಪಟ್ಟೆ ಬೇಜಾರಾಗಿದ್ದು, ಹೀಗಾಗಿ ಹೋದಲ್ಲಿ ಬಂದಲ್ಲಿ ರಾಜಾಹುಲಿಗೆ ಗಡ್ಡ ತೆಗೆಯುವಂತೆ ಖಡಕ್ ವಾರ್ನ್ ಕೊಡುತ್ತಿದ್ದಾರಂತೆ. ಆದಷ್ಟು ಬೇಗ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಸಿನಿಮಾ ಶೂಟಿಂಗ್ ಮುಗಿಸಿ ತೆರೆ ಮೇಲೆ ಯಾವ ರೀತಿ ಪ್ರೇಕ್ಷಕನನ್ನು ಯಾವ ರೀತಿ ಫಿದಾ ಮಾಡುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.
Comments