ನ.19ರಂದು ಈ ಬಾಲಿವುಡ್ ಜೋಡಿಯ ಮದುವೆಯಂತೆ?



ಇತ್ತಿಚಿಗೆ ಸ್ಯಾಂಡ್ಲ್ ವುಡ್,ಬಾಲಿವುಡ್,ಟಾಲಿವುಡ್,ಕಾಲಿವುಡ್ ಎಲ್ಲಿ ನೋಡಿದರೂ ಮದುವೆ ಮಾತೆ ಕೇಳಿ ಬರುತ್ತಿದೆ.ಬಾಲಿವುಡ್ ಜೋಡಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಮದುವೆ ಯಾವಾಗ ಎಂಬ ಕುತೂಹಲಕ್ಕೆ ಇದೀಗ ತೆರೆಬಿದ್ದಿದೆ.
ನ.19ರಂದು ಇವರಿಬ್ಬರೂ ಹಸೆಮಣೆಯನ್ನು ಏರಲಿದ್ದಾರೆ ಎಂದು ಸಿನಿ ಪತ್ರಿಕೆ 'ಫಿಲ್ಮ್ ಫೇರ್' ವರದಿಯನ್ನು ಮಾಡಿದೆ.ಆದರೆ, ದೀಪಿಕಾ ಪಡುಕೋಣೆ ಅಥವಾ ರಣವೀರ್ ಸಿಂಗ್ ಈ ಸುದ್ದಿಯನ್ನು ಖಚಿತಪಡಿಸಿಲ್ಲ. ವಿವಾಹದ ಕುರಿತ ಸುದ್ದಿಯನ್ನು ತಾವೇ ಮೊದಲು ಬಹಿರಂಗಪಡಿಸುತ್ತೇನೆ ಎಂದು ರಣವೀರ್‌ಸಿಂಗ್ ಸ್ಪಷ್ಟನೆ ನೀಡಿದ್ದಾರೆ. ಈ ಹಿಂದೆ ದೀಪಿಕಾ ಪಡುಕೋಣೆಯ ಬಗ್ಗೆ ರಣವೀರ್ ಸಿಂಗ್ ಬಹಿರಂಗವಾಗಿ ಪ್ರೀತಿಯನ್ನು ವ್ಯಕ್ತಪಡಿಸಿದ್ದರು. ಇಬ್ಬರೂ ಸ್ವಿಜರ್ಲೆಂಡ್‌ನಲ್ಲಿ ಮದುವೆ ಆಗಲಿದ್ದಾರೆ ಎಂದು ಈ ಹಿಂದೆ ಸುದ್ದಿಯೂ ಕೂಡ ಆಗಿತ್ತು.
Comments