ಕನ್ನಡಿಗರ ಮನಗೆದಿದ್ದ ಸಿಂಬು ಬೆಂಗಳೂರಿಗೆ ಬರ್ತಿದ್ದಾರಂತೆ..!

ಕಾವೇರಿ ವಿಷಯವಾಗಿ ಕರ್ನಾಟಕದ ಪರವಾಗಿ ಮಾತನಾಡಿ ಕನ್ನಡಿಗರ ಮನಗೆದ್ದಿಂತಹ ತಮಿಳು ನಟ ಸಿಂಬು ಅವರು ಇದೀಗ ಬೆಂಗಳೂರಿಗೆ ಬಂದು ಶಿವರಾಜ್ ಕುಮಾರ್ ಅವರನ್ನು ಭೇಟಿಯಾಗ್ತಾರಂತೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಎಸ್... ನಟ ಸಿಂಬು ಅವರು ಬೆಂಗಳೂರಿಗೆ ಬರುತ್ತಿರುವುದಕ್ಕೂ ಕಾರಣ ಇದೆ. ಅದೇನೆಂದರೆ ಸಿಂಬು ಇತ್ತೀಚಿಗಷ್ಟೆ ಕನ್ನಡದ 'ಇರುವುದೆಲ್ಲವ ಬಿಟ್ಟು ಇರುವೆ ಬಿಟ್ಟುಕೊಳ್ಳುವುದೇ ಜೀವನ' ಸಿನಿಮಾದ ಒಂದು ಹಾಡನ್ನು ಹಾಡಿದ್ದರು. ಇದು ಅವರ ಮೊದಲ ಕನ್ನಡ ಹಾಡಾಗಿತ್ತು. ಈ ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮ ಇದೇ ತಿಂಗಳ 25ಕ್ಕೆ ನಡೆಯಲಿದ್ದು ಸಿಂಬು ಅವರೇ ಚಿತ್ರದ ಆಡಿಯೋ ರಿಲೀಸ್ ಕೂಡ ಮಾಡಲಿದ್ದಾರಂತೆ. ಸಿಂಬು ಅವರ ಜೊತೆಗೆ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಹಾಗೂ ಧ್ರುವ ಸರ್ಜಾ ಅವರು ಕೂಡ ಕಾರ್ಯಕ್ರಮದ ಅತಿಥಿ ಆಗಲಿದ್ದು ಈ ಮೂಲಕ ಸಿಂಬು ಈ ಕಾರ್ಯಕ್ರಮದಲ್ಲಿ ಶಿವರಾಜ್ ಕುಮಾರ್ ಅವರನ್ನು ಭೇಟಿ ಮಾಡಲಿದ್ದಾರೆ.. 'ಇರುವುದೆಲ್ಲವ ಬಿಟ್ಟು ಇರುವೆ ಬಿಟ್ಟುಕೊಳ್ಳುವುದೇ ಜೀವನ' ಚಿತ್ರ ತೆರೆ ಮೇಎಲ ಯಾವ ರೀತಿ ಮೂಡಿ ಬರುತ್ತೆ ಅನ್ನೋದನ್ನ ಕಾದು ನೋಡಲೇ ಬೇಕು.
Comments