ಸಖತ್ ಟ್ರೆಂಡ್ ಕ್ರಿಯೆಟ್ ಮಾಡ್ತಿದೆ ಸುದೀಪ್ ಅವರ ಈ ಲುಕ್..!
ಸ್ಯಾಂಡಲ್ ವುಡ್ ನಲ್ಲಿ ಸ್ಟೈಲಿಶ್ ಸ್ಟಾರ್ ಎಂದರೆ ನೆನಪಾಗೋದು ಕಿಚ್ಚ ಸುದೀಪ್. ಹೇರ್ ಸ್ಟೈಲ್, ಡ್ರೆಸ್, ವಾಕಿಂಗ್, ಡೈಲಾಗ್ ಡೆಲವರಿ ಹೀಗೆ ಸುದೀಪ್ ಏನೇ ಮಾಡಿದ್ರು, ಅದು ಒಂದು ರೀತಿ ಟ್ರೆಂಡ್ ಕ್ರಿಯೆಟ್ ಆಗುತ್ತೆ. ಹೆಬ್ಬುಲಿ ಹೇರ್ ಸ್ಟೈಲ್, ವಿಲನ್ ಹೇರ್ ಸ್ಟೈಲ್ ನಂತರ ಈಗ ಕಿಚ್ಚನ ವಾಕಿಂಗ್ ಸ್ಟೈಲ್ ಕೂಡ ಒಂಥರಾ ಟ್ರೆಂಡ್ ಆಗ್ತಿದೆ.
ಎಸ್, ಕಿಚ್ಚ ಸುದೀಪ್ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ದಿ ವಿಲನ್’ ಸಿನಿಮಾದ ಹೊಸ ಪೋಸ್ಟರ್ ಈಗ ಸಖತ್ ಸದ್ದು ಮಾಡುತ್ತಿದೆ. ಚಿತ್ರದಲ್ಲಿ ಸುದೀಪ್ ಅವರು ನಿಂತಿರುವ ಸ್ಟೈಲ್ ನ್ನ ಅಭಿಮಾನಿಗಳು ಅನುಸರಿಸುತ್ತಿದ್ದಾರೆ. ಕಿಚ್ಚನಂತೆ ಫೋಸ್ ಕೊಟ್ಟು ಸ್ಮೈಲ್ ಮಾಡೊದ್ರಲ್ಲಿ ಅಭಿಮಾನಿಗಳು ಬಿಜಿಯಾಗಿದ್ದಾರೆ. 'ವಿಲನ್' ಹೊಸ ಅವತಾರದಲ್ಲಿ ಫೋಟೋಗಳನ್ನ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಿದ್ದಾರೆ. ಇನ್ನು ಈ ಕ್ರೇಜ್ ನೋಡಿದ ಸುದೀಪ್ ಖುಷಿಯನ್ನ ವ್ಯಕ್ತಪಡಿಸಿದ್ದಾರೆ. ಅಭಿಮಾನಿಗಳ ಈ ಫೋಟೋಗಳಿಗೆ ಮೆಚ್ಚುಗೆಯನ್ನು ಕೂಡ ವ್ಯಕ್ತ ಪಡಿಸಿದ್ದಾರೆ.
Comments