ಸ್ಯಾಂಡಲ್ ವುಡ್ ಗೆ ರೀ ಎಂಟ್ರಿ ಕೊಟ್ಟ ಕ್ರೇಜಿ ಕ್ವೀನ್..!
ಸ್ಯಾಂಡಲ್ ವುಡ್ನಲ್ಲಿ ಕ್ರೇಜಿ ಕ್ವೀನ್ ಅಂದರೆ ಎಲ್ಲರಿಗೂ ನೆನಪಾಗೋದು ರಕ್ಷಿತಾ.. ಮದುವೆಯ ನಂತರ ನಟಿ ರಕ್ಷಿತ ಸಿನಿಮಾಗಳಲ್ಲಿ ಅಭಿನಯಿಸುತ್ತಿಲ್ಲ.. ಕ್ರೇಜಿ ಅವರು ಇದೀಗ ನಟಿಯೊಬ್ಬರ ಪಾತ್ರಕ್ಕೆ ಧ್ವನಿ ನೀಡುವುದರ ಮೂಲಕ ಮತ್ತೆ ಸ್ಯಾಂಡಲ್ ವುಡ್ ಗೆ ರಿ ಎಂಟ್ರಿ ಕೊಟ್ಟಿದ್ದಾರೆ.
ಎಸ್.. ನಟಿ ರಕ್ಷಿತಾ ಅವರು 'ದಿ ವಿಲನ್'' ಚಿತ್ರದ ನಾಯಕಿಯಾಗಿ ನಟಿಸಿರುವ ಆಯಮಿ ಜಾಕ್ಸನ್ ಅವರ ಪಾತ್ರಕ್ಕೆ ಧ್ವನಿಯಾಗಲಿದ್ದಾರೆ. ರಕ್ಷಿತಾ ತಮ್ಮ ಸಿನಿಮಾಗಳಿಗೆ ತಾವೇ ಡಬ್ ಮಾಡುತ್ತಿದ್ದರು. ಆದರೆ ಅವರ ಧ್ವನಿಯನ್ನು ಮಿಸ್ ಮಾಡಿಕೊಳ್ಳುತ್ತಿರುವವರಿಗೆ ಇದೀಗ ಅವರ ಧ್ವನಿಯನ್ನು 'ದಿ ವಿಲನ್'' ಚಿತ್ರದ ಮೂಲಕ ಮತ್ತೆ ಕೇಳುವ ಮತ್ತೊಂದು ಅವಕಾಶ ಸಿಕ್ಕಿದೆ. ರಕ್ಷಿತಾ ಅವರಿಂದ ಡಬ್ಬಿಂಗ್ ಮಾಡಿಸಲು ಕಾರಣ ಏನು ಎಂಬುದನ್ನು ಕೂಡ 'ದಿ ವಿಲನ್'' ಚಿತ್ರದ ನಿರ್ದೇಶಕ ಪ್ರೇಮ್ ತಿಳಿಸಿದ್ದಾರೆ. ಅವರ ಪ್ರಕಾರ ರಕ್ಷಿತಾ ಅವರ ಧ್ವನಿ ಆಯಮಿ ಜಾಕ್ಸನ್ ಪಾತ್ರಕ್ಕೆ ಚೆನ್ನಾಗಿ ಹೋಲುತ್ತಂತೆ. ಜೊತೆಗೆ ಇಂಗ್ಲೀಷ್ ಮಿಕ್ಸ್ ಕನ್ನಡ ಮಾತನಾಡುವ ಪಾತ್ರವಾದ್ದರಿಂದ ರಕ್ಷಿತಾ ಅವರಿಂದ ಡಬ್ಬಿಂಗ್ ಮಾಡಿಸಲಾಗಿದೆ ಎಂದು ತಿಳಿಸಿದೆ ಚಿತ್ರತಂಡ..
Comments