ಡಿ ಬಾಸ್ ಕಾರಿನ ಜೊತೆ ಅಭಿಮಾನಿಗಳ ಫೋಟೋ..!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಇತ್ತೀಚಿಗಷ್ಟೆ ಹೊಸ ಕಾರನ್ನು ಖರೀದಿ ಮಾಡಿದ್ದರು. ಆದರೆ ಈಗ ಈ ಕಾರ್ ಅಭಿಮಾನಿಗಳ ಆಕರ್ಷಣೆಗೆ ದಾರಿ ಆಗಿದೆ. ದರ್ಶನ್ ಅವರ ಅಭಿಮಾನಿಗಳು ಇದೀಗ ಆ ಕಾರ್ ಜೊತೆಗೆ ಸಖತ್ ಆಗಿಯೇ ಫೋಟೋ ತೆಗೆದುಕೊಳ್ಳುತ್ತಿದ್ದಾರೆ.
ದರ್ಶನ್ ಅವರ ಫೋರ್ಡ್ ಮಸ್ಟಂಗ್ (ford mustang) ಕಾರ್ ಈಗ ರೋಡಿಗೆ ಇಳಿದಿದೆ. ದರ್ಶನ್ ಅವರ ಕಾರಿನ ಜೊತೆಗೆ ಅವರ ಫ್ಯಾನ್ಸ್ ಫೋಟೋ ತೆಗೆದುಕೊಳ್ಳೋದ್ರರಲ್ಲಿ ಬಿಜಿಯಾಗಿದ್ದಾರೆ. ಮೆಚ್ಚಿನ ನಟನ ಹೊಸ ಕಾರ್ ನೋಡಿ ಅಭಿಮಾನಿಗಳು ಸಖತ್ ಖುಷಿ ಪಟ್ಟಿದ್ದಾರೆ. ಕಳೆದ ಕೆಲ ತಿಂಗಳ ಹಿಂದೆಯಷ್ಟೆ 5.8 ಕೋಟಿಯ ಲಂಬೋರ್ಗಿನಿ ಖರೀದಿ ಮಾಡಿದ್ದ ದರ್ಶನ್ ಈಗ ಮತ್ತೊಂದು ಹೊಸ ಕಾರಿನ ಮಾಲೀಕನಾಗಿದ್ದರು. ಡಿ-ಬಾಸ್ ಕೆಲ ದಿನಗಳ ಹಿಂದೆಯಷ್ಟೆ 'ಫೋರ್ಡ್ ಮಸ್ಟಾಂಗ್' (ford mustang) ಕಾರ್ ಕೊಂಡುಕೊಂಡಿದ್ದಾರೆ. ಈ ಹೊಸ ಕಾರ್ ಹಳದಿ ಬಣ್ಣದಾಗಿದೆ. 'ಫೋರ್ಡ್ ಮಸ್ಟಾಂಗ್' (ford mustang) ಬೆಲೆ 75 ಲಕ್ಷ ಇದ್ದು. ಇತರೆ ಖರ್ಚು ಸೇರಿ ಅಂದಾಜು ಒಂದು ಕೋಟಿ ಆಗಬಹುದು.
.
Comments