ಅಪ್ಪನ ಜೊತೆ 'ಕುಸ್ತಿ' ಆಡೋದಕ್ಕೆ ಸೈ ಎಂದ ಮಗ- ವಿಡಿಯೋ ವೈರಲ್

ಸ್ಯಾಂಡಲ್ ವುಡ್ನಲ್ಲಿ ಬ್ಲ್ಯಾಕ್ ಕೋಬ್ರಾ ಅಂತಾನೇ ಫೇಮಸ್ ಆಗಿರೋ ನಟ ದುನಿಯಾ ವಿಜಯ್ ಪುತ್ರ ಸಾಮ್ರಾಟ್ ವಿಜಯ್ ಬಣ್ಣದಲೋಕಕ್ಕೆ ಎಂಟ್ರಿ ಕೊಡಲಿದ್ದಾರೆ. ಎಸ್….ವಿಜಯ್ ಅವರ ಹೊಸ ಸಿನಿಮಾ ಕುಸ್ತಿಯಲ್ಲಿ ಸಾಮ್ರಾಟ್ ಮರಿ ಪೈಲ್ವಾನ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ
ಅನಿಲ್ ಮಂಡ್ಯ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಸಿನಿಮಾ ಗ್ರಾಮೀಣ ಮಟ್ಟಿ ಕುಸ್ತಿಯನ್ನು ಆಧರಿಸಿದೆ ಎಂದು ಅನಿಲ್ ತಿಳಿಸಿದ್ದಾರೆ. ಈ ಪಾತ್ರಕ್ಕೆ ವಿಜಯ್ ಹೇಳಿ ಮಾಡಿಸಿದ ನಟರಾಗಿದ್ದಾರೆ. ಪುತ್ರ ಸಾಮ್ರಾಟ್ ಕೂಡ ಅಪ್ಪನ ತರ ಶಿಸ್ತನ್ನು ಮೈಗೂಡಿಸಿಕೊಂಡಿದ್ದಾರೆ ಎಂದು ಅನಿಲ್ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಚಿತ್ರದಲ್ಲಿ ವಿಜಯ್ ಪುತ್ರ ಸಾಮ್ರಾಟ್ ಮರಿ ಪೈಲ್ವಾನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ. ಚಿತ್ರ ಕಥೆಯನ್ನು ಸ್ವತಃ ದುನಿಯಾ ವಿಜಯ್ ಬರೆದಿದ್ದು, ಅದಕ್ಕಾಗಿ ಪ್ರಖ್ಯಾತ ಕುಸ್ತಿ ಪಟುಗಳಿಂದಲೇ ಮಾಹಿತಿಯನ್ನು ಸಂಗ್ರಹಿಸಿ ಸಾಕಷ್ಟು ತಯಾರಿಯನ್ನು ನಡೆಸುತ್ತಿದ್ದಾರೆ. ಇದೀಗ ಸಿನಿಮಾ ಆರಂಭಕ್ಕೂ ಮೊದಲೇ ಪಾತ್ರಕ್ಕಾಗಿ ಮಗ ಸಾಮ್ರಾಟ್ ನಡೆಸುತ್ತಿರುವ ತಯಾರಿಯ ವಿಡಿಯೋ ರಿಲೀಸ್ ಮಾಡಿರುವುದು ಎಲ್ಲರಲ್ಲೂ ಕುತೂಹಲ ಕೆರಳಿಸಿದೆ. ಈ ಚಿತ್ರ ಬಿಡುಗಡೆಯಾಗಲು ಇನ್ನೂ ಸಾಕಷ್ಟು ಸಮಯವೇ ಬೇಕು..ನೋಡೋಣ ಈ ಚಿತ್ರ ತೆರೆ ಮೇಲೆ ಯಾವ ರೀತಿ ಬರುತ್ತದೆ ಎಂದು.
Comments