ದಿಢೀರ್ ಅಂತ ರೆಬಲ್ ಸ್ಟಾರ್ ಕೇರಳ ಪ್ಲೈಟ್ ಹತ್ತಿದ್ಯಾಕೆ ಗೊತ್ತಾ?

23 May 2018 12:21 PM | Entertainment
488 Report

ಅಂಬಿ ರಾಜಕೀಯ ನಿವೃತ್ತಿ ಷೋಷಿಸಿಕೊಂಡ ಮೇಲೆ ಕೇರಳ ಕಡೆ ಮುಖ ಮಾಡಿದ್ದಾರೆ. ರಾಜಕೀಯದಿಂದ ಹೊರಬಂದ ಅಂಬಿ ಕೇರಳ ಕಡೆ ಹೊರಟಿರೋದಾದ್ರೂ ಏಕೆ ಎಂಬ ಪ್ರಶ್ನೆಗಳು ಕಾಡಬಹುದು.

ಅಂಬಿ ಅಷ್ಟೆ ಅಲ್ಲ ಅವರ ಜೊತೆಯಲ್ಲಿ ನಿರ್ಮಾಪಕ ಜಾಕ್​ ಮಂಜು ಮತ್ತು  ಕೊರಿಯೋಗ್ರಾಫರ್ ಆದ ಇಮ್ರಾನ್​ ಕೂಡ ಇವರಿಗೆ ಸಾಥ್​ ಕೊಟ್ಟಿದ್ದಾರೆ. ಇಂದು ಬೆಳಿಗ್ಗೆ ಅಂಬಿ ಜೊತೆಗಿನ ಫೋಟೋ ತೆಗೆದು  ಸಾಮಾಜಿಕ ಜಾಲತಾಣಗಳಿಗೆ ಅಪ್ಡೇಟ್ ಕೂಡ ಮಾಡಿದ್ದಾರೆ. ಅಂಬರೀಶ್​ ಅಭಿನಯದ ‘ ಅಂಬಿ ನಿನಗೆ ವಯಸ್ಸಾಯ್ತೋ’ ಸಿನಿಮಾ ಶೂಟಿಂಗ್​ಗೆಂದು ಇಂದು ಮುಂಜಾನೆಯೇ ವಿಮಾನ ಹತ್ತಿದ್ದಾರೆ ರೆಬಲ್ ಸ್ಟಾರ್.  ಸಿನಿಮಾ ಶೂಟಿಂಗ್​ ಇನ್ನೂ ಕೊನೆಯ ಹಂತದಲ್ಲಿದ್ದು  ಬೈಕ್​  ರೈಡ್​ಮಾಡಿ ತಮ್ಮ ಹಳೇ ಲವ್ವರ್​ ನ ಭೇಟಿ ಮಾಡುವ ಸನ್ನಿವೇಶವನ್ನು ಮತ್ತು ಇನ್ನು ಹಲವು ಸನ್ನಿವೇಶಗಳನ್ನು ಶೂಟ್​ ಮಾಡಲು ಚಿತ್ರ ತಂಡ ಕೇರಳ ಕಡೆ ಹೊರಟಿದ್ದಾರೆ. ಸಿನಿಮಾ ಇನ್ನೆನೂ ಕಂಪ್ಲೀಟ್ ಆಗಲಿದ್ದು ತೆರೆ ಮೇಲೆ ಯಾವ ರೀತಿ ಮೂಡಿಬರುತ್ತೆ ಅನ್ನೊದನ್ನ ಕಾದು ನೋಡಬೇಕಿದೆ.

Edited By

Manjula M

Reported By

Manjula M

Comments