ಡಬಲ್ ಖುಷಿಯಲ್ಲಿರುವ ಹ್ಯಾಟ್ರಿಕ್ ಹೀರೋ- ಕಾರಣ ಏನ್ ಗೊತ್ತಾ?

ಸ್ಯಾಂಡಲ್ ವುಡ್ ನಲ್ಲಿ ಹಿಟ್ ಮೇಲೆ ಹಿಟ್ ಮೂವಿಗಳನ್ನೂ ಕೊಟ್ಟಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಮನೆಯಲ್ಲಿ ಇಂದು ಡಬಲ್ ಸಂಭ್ರಮ. ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಸಪ್ತಪದಿ ತುಳಿದು ಇಂದಿಗೆ 32 ವರ್ಷ. ಶಿವರಾಜ್ ಕುಮಾರ್ ಮತ್ತು ಗೀತಾ ಶಿವರಾಜ್ ಕುಮಾರ್ ತಮ್ಮ 32ನೇ ವರ್ಷದ ಮದುವೆ ವಾರ್ಷಿಕೋತ್ಸವವನ್ನು ಆಚರಣೆ ಮಾಡಿಕೊಳ್ಳುತ್ತಿದ್ದಾರೆ.
ಇನ್ನೊಂದು ವಿಶೇಷ ಅಂದರೆ ಕನ್ನಡ ಸಿನಿಮಾರಂಗದಲ್ಲಿ ದಾಖಲೆಯನ್ನು ಸೃಷ್ಟಿ ಮಾಡಿದ ಚಿತ್ರ ಓಂ. ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದಲ್ಲಿ ಮೂಡಿ ಬಂದ ಓಂ ಸಿನಿಮಾ ರಿಲೀಸ್ ಆಗಿ ಇಂದಿಗೆ 23 ವರ್ಷಗಳು ಕಳೆದು ಹೋಗಿವೆ.ಇವತ್ತಿಗೂ ಕೂಡ ಲಾಂಗ್ ಅಂದರೆ ನೆನಪಾಗೋದು ಓಂ ಸಿನಿಮಾವೇ. ಇದೇ ಖುಷಿಯಲ್ಲಿ ಇಂದಿನಿಂದ ಬೆಂಗಳೂರಿನ ಕೆಂಗೇರಿ ಸಮೀಪವಿರುವ ವೆಂಕಟೇಶ್ವರ ಚಿತ್ರಮಂದಿರದಲ್ಲಿ ಓಂ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಚಿತ್ರ ನೋಡದೆ ಇರೋರು ಹೋಗಿ ಮೊದಲು ಸಿನಿಮಾ ನೋಡಿ.
Comments