ಸೆಂಚುರಿ ಅತ್ತ ಮುನ್ನುಗುತ್ತಿರುವ ಸಿನಿಮಾ ಹೊಸಬರ 'ಗುಳ್ಟು'
ಹೊಸಬರ ಸಿನಿಮಾಗಳು ಯಶಸ್ಸು ಕಾಣುವುದು ಅಪರೂಪ. ಅಲ್ಲೊಂದು ಇಲ್ಲೊಂದು ಚಿತ್ರ ನಿರೀಕ್ಷೆಗೂ ಮೀರಿ ಗೆಲುವು ಸಾಧಿಸುತ್ತೆ. ಅಂತಹ ಸಿನಿಮಾಗಳ ಪೈಕಿಯಲ್ಲಿ ಸದ್ದಿಲ್ಲದೇ ಗೆದ್ದು ಬೀಗಿದ ಚಿತ್ರ 'ಗುಳ್ಟು'.
ಆಧುನಿಕ ಜಗತ್ತಿನಲ್ಲಿ ಮನುಷ್ಯರು ಎಷ್ಟರ ಮಟ್ಟಿಗೆ ತಂತ್ರಜ್ಞಾನವನ್ನು ಅವಲಂಬಿಸಿದ್ದರೆ. ಅದನ್ನು ಹೇಗೆ ಉಪಯೋಗ ಮತ್ತು ದುರಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂಬುದನ್ನು ಈ ಸಿನಿಮಾದಲ್ಲಿ ಕೂಲಂಕುಷವಾಗಿ ತೋರಿಸಲಾಗಿತ್ತು. ಮನರಂಜನೆಯ ಜೊತೆ ಜೊತೆಗೆ ಜಾಗೃತಿ ಮೂಡಿಸಿದ 'ಗುಳ್ಟು' ಚಿತ್ರಕ್ಕೆ ಎಲ್ಲರಿಂದಲೂ ಮೆಚ್ಚಗೆ ಸಿಕ್ಕಿತ್ತು. ಸಿನಿ ಅಭಿಮಾನಿಗಳು, ಸಿನಿ ತಾರೆಯರು ಎಲ್ಲರೂ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ.
ಹೌದು, ಮಾರ್ಚ್ 30 ರಂದು ಬಿಡುಗಡೆಯಾಗಿದ್ದ ಸಿನಿಮಾ ಇನ್ನು ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇನ್ನು ಗುಳ್ಟು' ಸಿನಿಮಾದ ಯಶಸ್ಸು ನೋಡಿದ ಕೆಲವು ನಿರ್ಮಾಪಕರು 'ಗುಳ್ಟು' ಚಿತ್ರವನ್ನ ಮಲಯಾಳಂ ಮತ್ತು ತಮಿಳಿನಲ್ಲಿ ರೀಮೇಕ್ ಮಾಡಲು ಮನಸ್ಸು ಮಾಡಿದ್ದಾರೆ ಎನ್ನಲಾಗಿದೆ. ನವೀನ್ ಶಂಕರ್ ಮತ್ತು ಸೋನು ಗೌಡ ಅಭಿನಯದ 'ಗುಳ್ಟು' ಚಿತ್ರವನ್ನು ಜರ್ನಾಧನ್ ಚಿಕ್ಕಣ್ಣ ನಿರ್ದೇಶನ ಮಾಡಿದ್ದಾರೆ. ಅವಿನಾಶ್, ರಂಗಾಯಣ ರಘು ಅಂತಹ ಕಲಾವಿದರು ಪ್ರಧಾನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಚಿತ್ರಕ್ಕೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.
Comments