ಗೋಲ್ಡನ್ ಸ್ಟಾರ್ ಗಣೇಶ್ 'ಆರೆಂಜ್' ಚಿತ್ರಕ್ಕೆ ನಾಯಕಿ ಯಾರು ಗೊತ್ತಾ?

ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ನಿರ್ದೇಶಕ ಪ್ರಶಾಂತ್ ರಾಜ್ ಕಾಂಬಿನೇಷನ್ ನ ಎರಡನೇ ಸಿನಿಮಾ 'ಆರೆಂಜ್' ನ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಗಣೇಶ್ ಈ ಸಿನಿಮಾದಲ್ಲಿ ಕಲರ್ ಫುಲ್ ಆಗಿ ಕಾಣಿಸಿಕೊಂಡಿದ್ದಾರೆ. ಮೊನ್ನೆಯಷ್ಟೇ ಆರೆಂಜ್ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಎಂದಿನಂತೆ ನಿರ್ದೇಶಕ ಪ್ರಶಾಂತ್ ರಾಜ್, ತಮ್ಮ ಚಿತ್ರದ ಹೀರೋನನ್ನು ಕಲರ್ ಫುಲ್ ಆಗಿ ತೋರಿಸಿದ್ದಾರೆ.
'ನನಗೆ ಕಲರ್‌ಫುಲ್ ಆಗಿ ಸಿನಿಮಾ ಮಾಡುವುದು ಇಷ್ಟ. ಗೋಳಿನ ಕಥೆಯನ್ನು ಹೇಳಲು ಆಗಲ್ಲ. ಹಾಗಾಗಿಯೇ ನಾಯಕರಿಗೆ ಒಪ್ಪುವಂಥ ಕತೆ ಬರೆಯುತ್ತೇನೆ. ಈ ಸಿನಿಮಾದಲ್ಲಿ ಡಿಫರೆಂಟ್ ಆಗಿ ಗೋಲ್ಡನ್ ಸ್ಟಾರ್ ಗಣೇಶ್ ಕಾಣಿಸಿಕೊಂಡಿದ್ದಾರೆ. ಇಡೀ ಸಿನಿಮಾ ಹಾಗೆಯೇ ಸಾಗುತ್ತದೆ' ಅಂತಾರೆ ನಿರ್ದೇಶಕರು. ಈಗಾಗಲೇ ಒಂದು ಹಂತದ ಶೂಟಿಂಗ್ ಕೂಡ ಮುಗಿದಿದೆ. ಮತ್ತೊಂದು ಹಂತದ ಚಿತ್ರೀಕರಣಕ್ಕೆ ಸಿದ್ಧವಾಗಿದೆ ತಂಡ. ಶೂಟಿಂಗ್ ಹಂತದಲ್ಲಿಯೇ ಸಿನಿಮಾದ ಬಗ್ಗೆ ನಿರೀಕ್ಷೆ ಮೂಡಿದ್ದು, ಪ್ರಿಯಾ ಆನಂದ್ ನಾಯಕಿಯಾಗಿ ನಟಿಸುತ್ತಿದ್ದಾರೆ. ರಾಜಕುಮಾರ ಚಿತ್ರದ ನಂತರ ಪ್ರಿಯಾ ಒಪ್ಪಿಕೊಂಡ ಕನ್ನಡದ ಎರಡನೇ ಸಿನಿಮಾ ಇದಾಗಿದೆ.
Comments