ರಾಕಿಂಗ್ ಸ್ಟಾರ್ ಯಶ್ ಹೆಸರಲ್ಲೇ ಇದ್ಯಾ ಯಶಸ್ಸು..!?
ರಾಜ್ಯ ವಿಧಾನಸಭಾ ಚುನಾವಣೆ ರಂಗೇರಿದ್ದು, ಹಲವು ಸ್ಟಾರ್ ನಟ-ನಟಿಯರು ಅಭ್ಯರ್ಥಿಗಳು ಪರ ಅಬ್ಬರದ ಪ್ರಚಾರ ನಡೆಸಿದರು. ಸಿನಿಮಾ ಸ್ಟಾರ್ ಗಳನ್ನ ನೋಡೋಕೆ ಜನ ಬರ್ತಾರೆ ಅಷ್ಟೇ. ಆದ್ರೆ, ಯಾರೂ ಅವರನ್ನ ನೋಡಿ ವೋಟ್ ಹಾಕಲ್ಲ ಎನ್ನುವುದು ರಾಜಕೀಯದಲ್ಲಿ ವಲಯದಲ್ಲಿ ಕೇಳಿ ಬರುತ್ತಿತ್ತು.
ಹೀಗಿದ್ದರೂ, ಸ್ಯಾಂಡಲ್ ವುಡ್ ನ ಕೆಲವು ಸೂಪರ್ ಸ್ಟಾರ್ ನಟರು ಕೆಲವು ಅಭ್ಯರ್ಥಿಗಳ ಪರ ಮತಯಾಚನೆ ಮಾಡಿದ್ದರು. ರಾಕಿಂಗ್ ಸ್ಟಾರ್ ಯಶ್ ಕೂಡ ಪಕ್ಷಗಳನ್ನ ಮರೆತು ಅಭ್ಯರ್ಥಿಗಳಿಗಾಗಿ ಬೀದಿಗಿಳಿದು ರೋಡ್ ಶೋ ಮಾಡಿದ್ರು. ಇದೀಗ, ಕರ್ನಾಟಕ ಚುನಾವಣೆ ಮುಗಿದು, ಫಲಿತಾಂಶವೂ ಹೊರಬಿದ್ದಿದೆ. ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಬಾರದೇ ಅಸಲಿ ರಾಜಕೀಯ ಆರಂಭವಾಗಿದೆ. ಈ ಮಧ್ಯೆ, ಸ್ಟಾರ್ ನಟರು ಪ್ರಚಾರ ಮಾಡಿದ ಅಭ್ಯರ್ಥಿಗಳ ಹಣೆ ಬರಹ ಏನಾಯ್ತು ಎಂಬುದು ಸಾಮಾನ್ಯರಿಗೆ ಕುತೂಹಲ ಮೂಡಿಸಿತ್ತು. ಇದಕ್ಕೆ ಉತ್ತರ ಇಲ್ಲಿದೆ ನೋಡಿ.
ಮೈಸೂರಿನ ಕೆ.ಆರ್ ನಗರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಾರಾ ಮಹೇಶ್ ಅವರ ಪರವಾಗಿ ಪ್ರಚಾರ ಮಾಡುವುದರ ಮೂಲಕ ಚುನಾವಣೆ ಮತಭೇಟೆ ಆರಂಭಿಸಿದ್ದರು ರಾಕಿಂಗ್ ಸ್ಟಾರ್ ಯಶ್. ಸಾರಾ ಮಹೇಶ್ ಪರವಾಗಿ ರೋಡ್ ಶೋ ನಡೆಸಿ ಮತಯಾಚನೆ ಮಾಡಿದ್ದರು. ಫಲಿತಾಂಶದಲ್ಲಿ ದೊಡ್ಡ ಅಂತರದಿಂದಲೇ ಸಾರಾ ಮಹೇಶ್ ಗೆಲುವು ಸಾಧಿಸಿದ್ದಾರೆ. ಮೈಸೂರಿನ ಮತ್ತೊಂದು ಅಭ್ಯರ್ಥಿ ಪರ ಯಶ್ ಪತಯಾಚನೆ ಮಾಡಿದ್ದರು. ಕೆ.ಆರ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಮದಾಸ್ ಪರವಾಗಿ ಯಶ್ ರೋಡ್ ಶೋ ಮಾಡಿದ್ದರು. ಈಗ ರಾಮದಾಸ್ ಅವರು ಕೂಡ ಗೆಲುವು ಕಂಡಿದ್ದಾರೆ. ತುಮಕೂರು ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜ್ಯೋತಿ ಗಣೇಶ್ ಮತ್ತು ಶಿರಸಿಯ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗೆಡೆ ಕಾಗೇರಿ ಪರ ರಾಕಿಂಗ್ ಸ್ಟಾರ್ ಯಶ್ ಪ್ರಚಾರ ಮಾಡಿದ್ದರು. ಯಶ್ ಪ್ರಚಾರ ಮಾಡಿದ ಇವರಿಬ್ಬರು ಭರ್ಜರಿ ಗೆಲುವು ಕಂಡಿದ್ದಾರೆ. ಬೆಂಗಳೂರಿನ ಬೊಮ್ಮನಹಳ್ಳಿಯ ಬಿಜೆಪಿ ಅಭ್ಯರ್ಥಿ ಸತೀಶ್ ರೆಡ್ಡಿ ಅವರ ಪರವಾಗಿಯೂ ರಾಕಿಂಗ್ ಸ್ಟಾರ್ ರೋಡ್ ಶೋ ನಡೆಸಿದ್ದರು. ಗಾರ್ಮೆಂಟ್ಸ್ ಗಳಿಗೂ ತೆರಳಿ ಮತಯಾಚನೆ ಮಾಡಿದ್ದರು. ಅದರಂತೆ ಸತೀಶ್ ರೆಡ್ಡಿ ಕೂಡ ಭಾರಿ ಅಂತರದ ಮತಗಳಿಂದ ಭರ್ಜರಿಗಳಿಸಿದ್ದಾರೆ.
Comments