ನಾನು ಐಶ್ವರ್ಯರನ್ನು ವಿವಾಹ ಆಗಿಲ್ಲ- ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್

ಸ್ಯಾಂಡಲ್‍ವುಡ್ ಫೈರಿಂಗ್ ಸ್ಟಾರ್ ಎಂದೆ ಫೇಮಸ್ ಆದ ಹುಚ್ಚ ವೆಂಕಟ್ ಇತ್ತೀಚೆಗೆ ತಾವು ಮದುವೆಯಾಗಿದ್ದೇನೆ ಎಂದು ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸುದ್ದಿಯಾಗಿತ್ತು. ಆದರೆ ಈಗ ನಾನು ಮದುವೆ ಆಗಿಲ್ಲ ಅಂತಾ ಮತ್ತೊಂದು ವಿಡಿಯೋ ಹಾಕಿದ್ದಾರೆ.
ಇತ್ತೀಚೆಗೆ ವೆಂಕಟ್ ‘ಡಿಕ್ಟೇಟರ್ ಹುಚ್ಚ ವೆಂಕಟ್’ ಚಿತ್ರದ ಹಿರೋಹಿನ್ ಆದ ಐಶ್ವರ್ಯ ಅವರನ್ನು ಮದುವೆಯಾಗಿದ್ದೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದರು, ಆದರೆ ಈಗ ಸ್ವತಃ ಹುಚ್ಚ ವೆಂಕಟ್ ನಾನು ಮತ್ತೊಂದು ಮದುವೆ ಆಗಿಲ್ಲ. ಅದು ಸುಳ್ಳು ಸುದ್ದಿ ಎಂದು ಹೇಳಿಕೊಂಡಿದ್ದಾರೆ. ಐಶ್ವರ್ಯ ಅವರನ್ನು ಮದುವೆ ಆಗಿರುವುದು ಸಿನಿಮಾದಲ್ಲಿರುವ ದೃಶ್ಯ. ಅದನ್ನೇ ವಿಡಿಯೋ ಮಾಡಿ ರಿಲೀಸ್ ಮಾಡಿದ್ದೇನೆ ಅಷ್ಟೆ, ನಾನು ಯಾವತ್ತಿಗೂ ಒಬ್ಬಂಟಿ, ನನಗೆ ಯಾರೂ ಬೇಕಾಗಿಲ್ಲ ಎಂದು ಹುಚ್ಚ ವೆಂಕಟ್ ಹೇಳಿದ್ದಾರೆ.
Comments