ಜಿಮ್ ನಲ್ಲಿ ಬೆವರಿಳಿಸಿ ಸ್ಲಿಮ್ ಆದ್ಲು ಬಾಲಿವುಡ್ ಬೆಡಗಿ ಭೂಮಿ..!

ಬಾಲಿವುಡ್ ನಟಿ ಭೂಮಿ ಪಡ್ನೇಕರ್ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಬಾಲಿವುಡ್ ಫ್ಯಾನ್ಸ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಭೂಮಿಯ ಫೋಟೋ ವೈರಲ್ ಆಗಿದೆ. ವೈರಲ್ ಆಗಿರೋ ಫೋಟೋಗಳಲ್ಲಿ ಭೂಮಿ ಸಖತ್ ಸ್ಲಿಮ್ ಆಗಿ ಕಾಣಿಸುತ್ತಿದ್ದಾಳೆ.
ಭೂಮಿಯ ಹೊಸ ಲುಕ್ ಅಭಿಮಾನಿಗಳನ್ನು ಖುಷಿಪಡಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಭೂಮಿ ಹೊಸ ಲುಕ್ ಗೆ ಖುಷಿಯನ್ನು ವ್ಯಕ್ತಪಡಿಸಿದ್ದಾರೆ. 'ಜೋರ್ ಲಗಾ ಕೇ ಐಸ್ಸಾ' ಚಿತ್ರದ ಮೂಲಕ ಭೂಮಿ ಬಾಲಿವುಡ್ ಅಂಗಳಕ್ಕೆ ಪ್ರವೇಶ ಮಾಡಿದ್ದಳು. 2015ರಲ್ಲಿ ಆಯುಷ್ ಮಾನ್ ಖುರಾನಾ ಜೊತೆ ಭೂಮಿ ನಟಿಸಿದ್ದಳು. ಆ ಚಿತ್ರಕ್ಕಾಗಿ ಭೂಮಿ ತೂಕ ಹೆಚ್ಚಾಗಿಸಿಕೊಂಡಿದ್ದರು. ಸದ್ಯ ಜಿಮ್ ನಲ್ಲಿ ಭೂಮಿ ವೈಟ್ ಲಾಸ್ ಮಾಡುತ್ತಿದ್ದಾರೆ. ಜಿಮ್ ನಲ್ಲಿ ಕಸರತ್ತು ಮಾಡ್ತಿರುವ ಫೋಟೋಗಳನ್ನು ಭೂಮಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
Comments