ಅಂಬರೀಶ್ ಪುತ್ರ ಅಭಿಷೇಕ್ ಚೊಚ್ಚಲ ಚಿತ್ರಕ್ಕೆ ನಾಯಕಿ ಸಿಕ್ಕಿದ್ರಾ?
ಸ್ಯಾಂಡಲ್ ವುಡ್ ನ ರೆಬಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅವರ ಮೊದಲ ಚಿತ್ರಕ್ಕಾಗಿ ಪೋಟೊ ಶೂಟ್ ಈಗಾಗಲೇ ಮುಗಿದಿದೆ.. ಪ್ರಸಿದ್ಧ ಸಿನಿಮಾಟೋಗ್ರಾಫರ್ ಭುವನ್ ಗೌಡ ಅವರಿಂದ ಚಿತ್ರ ಫೊಟೊ ಶೂಟ್ ಮಾಡಿಸಿರೋದು ಎಲ್ಲರಿಗೂ ತಿಳಿದೆ ಇದೆ. ಅಲ್ಲದೇ ಚಿತ್ರಕ್ಕೆ ಅಮರ್ ಎಂದು ಹೆಸರನ್ನು ಇಡಲಾಗಿದೆ. ಅಂಬರೀಶ್ ಪುತ್ರ ಅಭಿಷೇಕ್ ಚಿತ್ರಕ್ಕಾಗಿ ಸ್ಯಾಂಡಲ್ ವುಡ್ ಕಾಯುತ್ತಿದೆ.
ಪ್ರಸಿದ್ಧ ನಿರ್ದೇಶಕರಾದ ನಾಗಶೇಖರ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಜೂನ್ ವೇಳೆಗೆ ಈ ಚಿತ್ರದ ಚಿತ್ರೀಕರಣವನ್ನು ಪ್ರಾರಂಭ ಮಾಡಲಾಗುತ್ತದೆ. ಆದರೆ ಈ ಚಿತ್ರಕ್ಕಿನ್ನೂ ನಾಯಕ ನಟಿಯ ಆಯ್ಕೆ ಮಾಡಲಾಗಿಲ್ಲ. ಇನ್ನುಈ ಅಭಿಷೇಕ್ ಜೊತೆ ಯಾವ ನಟಿ ಜೊತೆ ಸ್ಕ್ರೀನ್ ಷೇರ್ ಮಾಡಲಿದ್ದಾರೆ ಎನ್ನುವ ವಿಚಾರ ಸಸ್ಪೆನ್ಸ್ ಆಗಿಯೇ ಇದೆ. ಆದರೆ ಕನ್ನಡ ಅಥವಾ ಪರಭಾಷೆಯಿಂದ ಚಿತ್ರಕ್ಕೆ ನಾಯಕ ನಟಿಯನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ ಎನ್ನುವ ಮಾತುಗಳು ಕೂಡ ಕೇಳಿ ಬರುತ್ತಿವೆ. ಈ ಚಿತ್ರದ ಚಿತ್ರಿಕರಣ ಮುಗಿದು ಚಿತ್ರ ತೆರೆ ಮೇಲೆ ಯಾವ ರೀತಿ ಮೂಡಿ ಬರುತ್ತದೆ ಅನ್ನೋದನ್ನ ಕಾದು ನೋಡಬೇಕಿದೆ.
Comments