ವಿಘ್ನ ನಿವಾರಕ ಗಣೇಶನಿಗೆ ಧ್ವನಿ ನೀಡಿದ ಗೋಲ್ಡನ್ ಸ್ಟಾರ್ ಗಣೇಶ
ಗೋಲ್ಡನ್ ಸ್ಟಾರ್ ಗಣೇಶ್ ಸಿನಿಮಾದಲ್ಲಿ ಹೇಳುತ್ತಿದ್ದ ಡೈಲಾಗ್ ಅಂದರೆ ಎಲ್ಲರಿಗೂ ಕೂಡ ತುಂಬಾ ಇಷ್ಟ.. ಏಕೆಂದರೆ ಅಷ್ಟು ಚೆನ್ನಾಗಿ ಡೈಲಾಗ್ ಹೇಳುತ್ತಿದ್ದರು. ನಟ ಗಣೇಶ್ ಇಷ್ಟು ದಿನ ತಾವು ನಟನೆ ಮಾಡಿದ ಪಾತ್ರಕ್ಕೆ ಡಬ್ ಮಾಡುತ್ತಿದ್ದರು. ಆದರೆ ಈಗ ಗಣೇಶ್ ಬೇರೆ ಒಂದು ಪಾತ್ರಕ್ಕೆ ಧ್ವನಿಯನ್ನು ನೀಡಿದ್ದಾರೆ.
ನಟ ಶರಣ್ ಅಭಿನಯಿಸುತ್ತಿರುವ ' ರ‍್ಯಾಂಬೋ 2' ಸಿನಿಮಾ ಈಗಾಗಲೇ ಹಲವಾರು ವಿಶೇಷತೆಗಳ ಮೂಲಕ ಹೆಚ್ಚು ನಿರೀಕ್ಷೆಯನ್ನು ಹುಟ್ಟಿಸಿದೆ. ಈಗ ಚಿತ್ರದ ಒಂದು ಪಾತ್ರ ಸಖತ್ ಸುದ್ದಿ ಮಾಡುತ್ತಿದೆ. ' ರ‍್ಯಾಂಬೋ 2' ಚಿತ್ರದಲ್ಲಿ ವಿಘ್ನ ನಿವಾರಕ ಗಣೇಶನ ಪಾತ್ರ ಇದೆ. ಅನಿಮೇಶನ್ ಮೂಲಕ ಈ ಪಾತ್ರವನ್ನು ಸೃಷ್ಟಿಸಲಾಗಿದೆ. ದೇವರ ಪಾತ್ರಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಧ್ವನಿ ನೀಡಿದ್ದಾರೆ. ಚಿತ್ರದಲ್ಲಿರುವ ಗಣೇಶನಿಗೆ ಯಾರ ಬಳಿ ಧ್ವನಿ ಕೊಡಿಸುವುದು ಚಿತ್ರತಂಡ ಯೋಚನೆ ಮಾಡ್ತಿತ್ತು. ಕೊನೆಗೆ ಗಣೇಶ್ ಅವರ ಬಳಿ ಡಬ್ಬಿಂಗ್ ಮಾಡಿಸಿದೆ. ಗಣೇಶ ಎಂದ ಮೇಲೆ ಅವರ ವಾಹನ ಇಲಿ ಕೂಡ ಇರುತ್ತದೆ. ಆ ಇಲಿಯ ಪಾತ್ರಕ್ಕೆ ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟ ಶಿವರಾಜ್ ಕೆಆರ್ ಪೇಟೆ ಧ್ವನಿಯನ್ನು ನೀಡಿದ್ದಾರೆ. ರ‍್ಯಾಂಬೋ 2 ಸಿನಿಮಾ ಇದೇ ಶುಕ್ರವಾರ ಬಿಡುಗಡೆಯಾಗಲಿದ್ದು ಚಿತ್ರದಲ್ಲಿ ಶರಣ್ ಮತ್ತು ಆಶಿಕಾ ರಂಗನಾಥ್ ನಟಿಸಿದ್ದಾರೆ. ಈ ಚಿತ್ರ ತೆರೆ ಮೇಲೆ ಯಾವ ರೀತಿ ಮೂಡಿ ಬರುತ್ತದೆ ಅನ್ನೋದನ್ನ ಕಾದು ನೋಡಬೇಕು.
Comments