ಕರಾಟೆ ಕಿಂಗ್ ಶಂಕರಣ್ಣ ನ ಅಭಿಮಾನಿಗಳಿಗೆ ಸಿಹಿ ಸುದ್ದಿ...!!

14 May 2018 1:12 PM | Entertainment
1500 Report

ಕರಾಟೆ ಕಿಂಗ್ ನಟ ಶಂಕರ್ ನಾಗ್ ಅವರನ್ನು ನೆನೆದು ಇಂದಿಗೂ ಅದೆಷ್ಟೋ ಕಾರ್ಯಕ್ರಮಗಳು, ಒಳ್ಳೆಯ ಕೆಲಸಗಳು ನಡೆಯುತ್ತಲೇ ಇದೆ. ಈಗ ಅವರ ಹೆಸರಿನಲ್ಲಿ ಒಂದು ನಾಟಕೋತ್ಸವ ಸಹ ನಡೆಯುತ್ತಾ ಬರುತ್ತಿದೆ. ಶಂಕರ್ ನಾಗ್ ನಾಟಕೋತ್ಸವ ಇದೇ ತಿಂಗಳಿನಿಂದ ಶುರು ಆಗುತ್ತಿದೆ. ಪ್ರತಿ ವರ್ಷ ಶಂಕರ್ ನಾಗ್ ನಾಟಕೋತ್ಸವ ಕಾರ್ಯಕ್ರಮ ನಡೆಯುತ್ತಿದೆ.

ಈ ವರ್ಷ ಕೂಡ ನಾಟಕೋತ್ಸವ ಕಾರ್ಯಕ್ರಮ ನಡೆಯಲಿದೆ. ಇದೇ ತಿಂಗಳ 27 ರಿಂದ 30ರ ವರೆಗೆ ನಾಲ್ಕು ದಿನಗಳ ಕಾಲ ನಾಟಕಗಳನ್ನು ಆಯೋಜಿಸಲಾಗಿದೆ. ವಿಶೇಷ ಅಂದರೆ, ಶಂಕರ್ ನಾಗ್ ಅವರೇ ನಟಿಸಿದ್ದ ಕೆಲವು ನಾಟಕ ಮತ್ತು ಸಿನಿಮಾಗಳು ರಂಗಭೂಮಿ ಮೇಲೆ ಪ್ರದರ್ಶನ ಆಗಲಿದೆ. ಶಂಕರ್ ನಾಗ್ ಅವರ ಮೊದಲ ಸಿನಿಮಾವಾದ 'ಒಂದಾನೊಂದು ಕಾಲದಲ್ಲಿ' ಮೂಲಕ ಈ ನಾಟಕೋತ್ಸವಕ್ಕೆ ಚಾಲನೆ ಸಿಗಲಿದೆ. ಶಂಕರ್ ನಾಗ್ ನಾಟಕೋತ್ಸವ ನಾಟಕಗಳ ಪಟ್ಟಿ 27-05-2018 - ಒಂದಾನೊಂದು ಕಾಲದಲ್ಲಿ 28-05-2018 - ಟ್ರೇನ್ ಟು ಪಾಕಿಸ್ತಾನ್ 29-05-2018 - ಶರೀಫ 30-05-2018 - ನೀಲಿ ರಿಬ್ಬನ್. ಸಾತ್ವಿಕ ರಂಗತಂಡದ ನಯನ ಮತ್ತು ರಾಜ್ ಗುರು ಅವರಿಂದ ನಾಟಕೋತ್ಸವ ನಡೆಯುತ್ತಿದೆ. ರವೀಂದ್ರ ಕಲಾ ಕ್ಷೇತ್ರದಲ್ಲಿ ಪ್ರತಿದಿನ ಸಂಜೆ 5 ಗಂಟೆಗೆ ಪ್ರದರ್ಶನ ಇರುತ್ತದೆ. ಪ್ರವೇಶ ಉಚಿತವಾಗಿದ್ದು, ನಾಟಕ ನೋಡುವ ಆಸೆ ಇದ್ದವರು 9964140723 ಅಥವಾ 8884764509 ನಂಬರ್ ಗೆ ಕರೆ ಮಾಡಿ ಪಾಸ್ ಪಡೆಯಬಹುದಾಗಿದೆ.


 

Edited By

Shruthi G

Reported By

Shruthi G

Comments