ಅಭಿನಯ ಚಕ್ರವರ್ತಿ ಕಿಚ್ಚ ನ ಅಭಿಮಾನಿಗಳಿಗೆ ಗುಡ್ ನ್ಯೂಸ್....!!
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಮುಂದಿನ ಸಿನಿಮಾ 'ಪೈಲ್ವಾನ್' ಚಿತ್ರೀಕರಣಕ್ಕೆ ಸಮಯ ನಿಗದಿ ಆಗಿದೆ. ಟೈಟಲ್ ಮತ್ತು ಪೋಸ್ಟರ್ ನಿಂದಲೇ ಕನ್ನಡ ಸಿನಿಮಾ ವೀಕ್ಷಕರಲ್ಲಿ ಕುತೂಹಲ ಮೂಡಿಸಿದ್ದ ಪೈಲ್ವಾನ್ ಸಿನಿಮಾದ ಚಿತ್ರೀಕರಣ ಇನ್ನು ಕೆಲವೇ ದಿನಗಳಲ್ಲಿ ಶುರುವಾಗಲಿದೆ.
ಈಗಾಗಲೇ ಮುಹೂರ್ತ ಮುಗಿಸಿಕೊಂಡು ಚಿತ್ರಕ್ಕೆ ಬೇಕಿರುವಂತೆ ತಯಾರಿಗಳನ್ನೂ ಮಾಡಿಕೊಂಡಿರುವ ತಂಡ ಮತದಾನ ಮಾಡಿ ಚಿತ್ರೀಕರಣಕ್ಕಾಗಿ ಚೆನೈ ಗೆ ಪ್ರಯಾಣ ಬೆಳೆಸುತ್ತಿದೆ. ಕಿಚ್ಚ ಸುದೀಪ್ ನಾಯಕನಾಗಿ ಅಭಿನಯ ಮಾಡುತ್ತಿರುವ ಪೈಲ್ವಾನ್ ಸಿನಿಮಾವನ್ನ ಹೆಬ್ಬುಲಿ ಕೃಷ್ಣ ನಿರ್ದೇಶನ ಮಾಡುತ್ತಿದ್ದಾರೆ. ನಿರ್ದೇಶನದ ಜೊತೆಯಲ್ಲಿ ಚಿತ್ರದ ನಿರ್ಮಾಣವನ್ನು ಮಾಡುತ್ತಿರುವ ಕೃಷ್ಣ, ಪ್ರೀ-ಪ್ರೊಡಕ್ಷನ್ ಗಾಗಿ ಸಾಕಷ್ಟು ಸಮಯ ತೆಗೆದುಕೊಂಡಿದ್ದರು. ಇನ್ನು ಹೆಬ್ಬುಲಿ ಚಿತ್ರದಲ್ಲಿ ಖಳನಟನಾಗಿ ಅಭಿನಯ ಮಾಡಿದ್ದ ಕಬೀರ್ ದುಹಾನ್ ಸಿಂಗ್ ಕೂಡ ಪೈಲ್ವಾನ್ ಸಿನಿಮಾದಲ್ಲಿ ಅಭಿನಯ ಮಾಡುತ್ತಿದ್ದಾರೆ. ಆದರೆ 'ಪೈಲ್ವಾನ್' ಚಿತ್ರದ ಬಗ್ಗೆ ಹೆಚ್ಚು ಮಾಹಿತಿ ನೀಡದ ನಿರ್ದೇಶಕ ಕೃಷ್ಣ ಚಿತ್ರೀಕರಣ ಚುನಾವಣೆಯ ತೀರ್ಪು ಹೊರಬಿದ್ದ ನಂತರ ಶುರುವಾಗಲಿದೆ. ಚಿತ್ರತಂಡ ಅದಕ್ಕೂ ಮುಂಚೆ ಚೆನೈ ತಲುಪಲಿದೆ ಎನ್ನುವ ವಿಚಾರವನ್ನು ತಿಳಿಸಿದ್ದಾರೆ.
Comments