ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ ಮಾಜಿ ವಿಶ್ವ ಸುಂದರಿ..!
ಬ್ಯೂಟಿ ಹಾಗೂ ಮಾಜಿ ವಿಶ್ವ ಸುಂದರಿಯಾದ ಐಶ್ವರ್ಯಾ ರೈ ಅಭಿಮಾನಿಗಳಿಗೆ ಸಿಹಿಸುದ್ದಿಯನ್ನು ನೀಡಿದ್ದಾರೆ. ಈವರೆಗೂ ಕೂಡ ಸಾಮಾಜಿಕ ಜಾಲತಾಣದಿಂದ ದೂರ ಉಳಿದಿದ್ದ ಮಾಜಿ ವಿಶ್ವ ಸುಂದರಿ ಐಶ್ವರ್ಯಾ ಇದೀಗ ಇನ್ ಸ್ಟಾಗ್ರಾಂ ಖಾತೆಯನ್ನು ತೆರೆದಿದ್ದು, ಇದರಿಂದ ಅಭಿಮಾನಿಗಳಿಗೆ ಖುಷಿ ಕೊಟ್ಟಿದ್ದಾರೆ.
ಯಾವುದೇ ಸಾಮಾಜಿಕ ಜಾಲತಾಣದಲ್ಲಿ ಇಲ್ಲದ ಐಶ್ವರ್ಯಾ ತಮ್ಮ ಜೀವನದ ಯಾವುದೇ ಸುಖ ಹಾಗೂ ದುಃಖ ಕ್ಷಣಗಳನ್ನೂ ಕೂಡ ಹಂಚಿಕೊಳ್ಳಲು ಇಷ್ಟಪಡುತ್ತಿರಲಿಲ್ಲ. ಆದರೆ ಇದೇ ಮೊದಲ ಬಾರಿಗೆ ಇನ್ ಸ್ಟಾಗ್ರಾಮ್ ನಲ್ಲಿ ಖಾತೆಯನ್ನು ತೆರೆದಿದ್ದಾರೆ. ಫ್ರಾನ್ಸ್ ನ ಕೇನ್ ಚಲನಚಿತ್ರೋತ್ಸವಕ್ಕೆ ತೆರಳುವ ಮುನ್ನ ಖಾತೆಯನ್ನು Aishwarya Rai Bachchan ಎಂಬ ಹೆಸರಿನಲ್ಲಿ ಈಗಾಗಲೇ ತೆರೆದಿದ್ದಾರೆ. ಅನೇಕ ದಿನಗಳಿಂದ ಐಶ್ವರ್ಯಾಗೆ ಅಭಿಮಾನಿಗಳಿಂದ ಖಾತೆ ತೆರೆಯುವಂತೆ ಒತ್ತಾಯಿಸಿದರು. ಅಭಿಮಾನಿಗಳಿಗೆ ಈ ಮೂಲಕ ಐಶ್ವರ್ಯ ಗುಡ್ ನ್ಯೂಸ್ ನೀಡಿದ್ದಾರೆ. ಈಗಾಗಲೇ ಅತ್ಯಧಿಕ ಸಂಖ್ಯೆಯಲ್ಲಿ ಅಭಿಮಾನಿಗಳು ಐಶ್ವರ್ಯಾರನ್ನು ಫಾಲೋ ಮಾಡಲು ಆರಂಭಿಸಿದ್ದಾರೆ.ಮುಂದೊಂದಿನ ಹೆಚ್ಚು ಖಾತೆಯಲ್ಲಿ ಅಧಿಕ ಫಾಲೋವರ್ಸ್ ಆಗೋದರಲ್ಲಿ ನೋ ಡೌಟ್..
Comments