ಸ್ನೇಹಿತನ ಜೊತೆ ಆಟೋ ಹತ್ತಿದ ಗೋಲ್ಡನ್ ಸ್ಟಾರ್ ಗಣೇಶ್.!

ನಟ ಗೋಲ್ಡನ್ ಸ್ಟಾರ್ ಗಣೇಶ್ ಇದೀಗ ಈಗ ಆಟೋದಲ್ಲಿ ಪ್ರಯಾಣ ಬೆಳೆಸಿದ್ದಾರೆ. ಯಾವಾಗಲೂ ಕಾರ್ ನಲ್ಲಿ ಸುತ್ತಾಡುವ ಈ ಸ್ಟಾರ್ ನಟ ಇದೀಗ ಆಟೋದಲ್ಲಿ ಪ್ರಯಾಣವನ್ನು ಬೆಳೆಸಿದ್ದಾರೆ.
ಗಣೇಶ್ ಮತ್ತು ಅವರ ಸ್ನೇಹಿತರಾದ ನಟ ರವಿಶಂಕರ್ ಇಬ್ಬರು ಆಟೋದಲ್ಲಿ ಜರ್ನಿ ಮಾಡಿದ್ದಾರೆ. ಈ ವಿಡಿಯೋವನ್ನು ಗೋಲ್ಡನ್ ಸ್ಟಾರ್ ಗಣೇಶ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ತುಂಬ ದಿನಗಳ ನಂತರ ಆಟೋದಲ್ಲಿ ಓಡಾಡುತ್ತಿರುವುದು ಖುಷಿ ನೀಡುತ್ತಿದೆ ಎಂದು ಗಣೇಶ್ ತಮ್ಮ ಟ್ವಿಟ್ಟರ್ ಹೇಳಿದ್ದಾರೆ. ಮತ್ತೊಂದು ಕಡೆ ಗಣಿ ಚುನಾವಣಾ ಪ್ರಚಾರದಲ್ಲಿ ಸಿಕ್ಕಾಪಟ್ಟೆ ಬಿಜಿ ಇದ್ದಾರೆ. ಪದ್ಮನಾಭ ನಗರದಲ್ಲಿ ರೋಡ್ ಶೋ ಮಾಡುವ ಮೂಲಕ ಆರ್.ಅಶೋಕ್ ಅವರ ಪರವಾಗಿ ಗಣೇಶ್ ಮತಯಾಚನೆ ಮಾಡಿದ್ದಾರೆ
Comments