ರೆಬಲ್ ಸ್ಟಾರ್ ಮಗ ಅಭಿಷೇಕ್, ಪ್ರಭಾಸ್ ರೇಂಜ್ ಗೆ ಕಾಣ್ತಾರಂತೆ. ಹೀಗೆ ಹೇಳಿದ್ದು ಯಾರು ಗೊತ್ತಾ?

ಸ್ಯಾಂಡಲ್ ವುಡ್ ನಲ್ಲಿ ರೆಬಲ್ ಸ್ಟಾರ್ ಅಂಬರೀಶ್ ಅವರಿಗೆ ಅವರದೆ ಆದಂತಹ ಅಭಿಮಾನಿಗಳು ಇದ್ದಾರೆ. ಇದೀಗ ಅ ಅವರ ಮನಗ ಸರದಿ. ಅಂಬರೀಶ್ ಪುತ್ರ ಅಭಿಷೇಕ್ ಅಭಿನಯದ ಚಿತ್ರ ಕೊನೆಗೂ ಶುರುವಾಗುವ ಹಂತಕ್ಕೆ ಬಂದಿದೆ. ಈ ಚಿತ್ರವನ್ನು ನಾಗಶೇಖರ್ ನಿರ್ದೇಶನ ಮಾಡುತ್ತಿದ್ದು, ಈಗಾಗಲೇ ಚಿತ್ರದ ಕೆಲಸ ಪ್ರಾರಂಭವಾಗಿದೆ.
ನಿರ್ದೆಶಕ ನಾಗಶೇಖರ್ ಈಗಾಗಲೇ ತಮ್ಮ ತಂಡದ ಜೊತೆಗೆ ಸ್ಕ್ರಿಪ್ಟ್ ಕೆಲಸದಲ್ಲಿ ನಿರತರಾಗಿದ್ದು, ಈ ಮಧ್ಯೆ ಚಿತ್ರದ ಫೋಟೋ ಶೂಟ್ ಕೂಡಾ ಮುಗಿದಿದೆ. ಈ ಫೋಟೋ ಶೂಟ್ ಮಾಡಿದ್ದು ಭುವನ್ ಗೌಡ, ಅದರಲ್ಲಿ ಅಭಿಷೇಕ್ ಪ್ರಭಾಸ್ ರೇಂಜ್ ಗೆ ಅಭಿಷೇಕ್ ಕಾಣಿಸುತ್ತಾರೆ ಎಂದು ನಾಗಶೇಖರ್ ಹೇಳಿಕೊಂಡಿದ್ದಾರೆ. ‘ಅಮರ್’ ಚಿತ್ರವನ್ನು ಸಂದೇಶ್ ನಾಗರಾಜ್ ನಿರ್ಮಿಸುತ್ತಿದ್ದು, ಚುನಾವಣೆಯ ನಂತರ ಚಿತ್ರೀಕರಣವು ಆರಂಭವಾಗಲಿದೆ. ಚಿತ್ರಕ್ಕೆ ಸತ್ಯ ಹೆಗಡೆ ಛಾಯಾಗ್ರಹಣ, ಅರ್ಜುನ್ ಜನ್ಯಾ ಸಂಗೀತ, ದೀಪು ಎಸ್. ಕುಮಾರ್ ಸಂಕಲನವಿದೆ.ಅಭಿಷೇಕ್ ಈ ಚಿತ್ರವನ್ನು ತೆರೆ ಮೇಲೆ ನೋಡಲು ಇನ್ನು ಎಷ್ಟು ವರ್ಷ ಕಾಯಬೇಕೋ ಗೊತ್ತಿಲ್ಲ.
Comments