ಸದ್ದಿಲ್ಲದೇ ಹಸೆಮಣೆ ಏರಿದ ನೇಹಾ ಧೂಪಿಯಾ
ಬಾಲಿವುಡ್ ನಲ್ಲಿ ಮದುವೆ ಸೀಸನ್ ಶುರುವಾಗಿದೆ. ಅನುಷ್ಕಾ ಶರ್ಮಾ, ಸೋನಂ ಕಪೂರ್ ನಂತರ ಇದೀಗ ನೇಹಾ ಧೂಪಿಯಾ ಸರದಿ. ನಟ ಅಂಗದ್ ಬೇಡಿಯೊಂದಿಗೆ ನೇಹಾ ಸದ್ದಿಲ್ಲದೇ ಹಸೆಮಣೆ ಏರಿದ್ದಾರೆ.
ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂ ನಲ್ಲಿ ಮದುವೆಯ ಫೋಟೋದೊಂದಿಗೆ ಬೆಸ್ಟ್ ಫ್ರೆಂಡ್ಸ್, ಈಗ ಪತಿ, ಪತ್ನಿಯಾಗಿದ್ದೇವೆ. ನಾನು ಇನ್ಮುಂದೆ ಮಿಸೆಸ್ ಬೇಡಿ ಅಂತಾ ಬರೆದುಕೊಂಡಿದ್ದಾರೆ ನೇಹಾ ಧೂಪಿಯಾ. ನೇಹಾ ಮತ್ತು ಅಂಗದ್ ಪ್ರೀತಿ, ಪ್ರೇಮದ ಬಗ್ಗೆ ಎಲ್ಲಿಯೂ ಗಾಳಿ ಸುದ್ದಿ ಇರಲಿಲ್ಲ. ಆದ್ರೆ ಸದ್ದಿಲ್ಲದೆ ಈ ಜೋಡಿ ಮದುವೆಯಾಗಿದ್ದು, ನೇಹಾ ಅಭಿಮಾನಿಗಳಿಗೆ ಶಾಕ್ ಆಗಿದೆ. ದೆಹಲಿಯಲ್ಲಿ ಸಿಖ್ ಸಂಪ್ರದಾಯದಂತೆ ಇವರಿಬ್ಬರ ವಿವಾಹ ನಡೆದಿದ್ದು, ಕೇವಲ ಕುಟುಂಬಸ್ಥರು ಮಾತ್ರ ಭಾಗವಹಿಸಿದ್ರು. ಅಂಗದ್ ಬೇಡಿ ಮಾಜಿ ಕ್ರಿಕೆಟಿಗ, ಬಿಶನ್ ಸಿಂಗ್ ಬೇಡಿಯವರ ಮಗನಾಗಿದ್ದು, 'ಟೈಗರ್ ಜಿಂದಾ ಹೈ', 'ಪಿಂಕ್', 'ಡಿಯರ್ ಜಿಂದಗಿ' ಚಿತ್ರದ ಮೂಲಕ ಖ್ಯಾತಿ ಹೊಂದಿದ್ದಾರೆ. ನೇಹಾ ಧೂಪಿಯಾ ಕೂಡಾ ಎಂಟಿವಿ ರೋಡಿಸ್ ಮತ್ತು ರೇಡಿಯೋ ಕಾರ್ಯಕ್ರಮದ ಮೂಲಕ ಚಿರಪರಿಚಿತರು.
Comments