ಸಾಯಿಪಲ್ಲವಿ ಹುಟ್ಟುಹಬ್ಬಕ್ಕೆ ಶುಭಾಷಯ ಕೋರಿದ ಕರ್ನಾಟಕದ ಕ್ರಶ್..!

ಕಿರಿಕ್ ಪಾರ್ಟಿ ಚಿತ್ರ ರಿಲೀಸ್ ಆಗಿ ವರ್ಷಗಳೆ ಕಳೆಯುತ್ತಿವೆ. ಆದರೂ ಕೂಡ ಆ ಚಿತ್ರವನ್ನು ಅಭಿಮಾನಿಗಳು ಇನ್ನೂ ಮರೆತಿಲ್ಲ. ಕಿರಿಕ್ ಪಾರ್ಟಿ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಡ ರಶ್ಮಿಕಾ ಮಂದಣ್ಣ ಕರ್ನಾಟಕದ ಕ್ರಶ್ ಅಂತಾನೇ ಫೇಮಸ್ ಆದ್ರು.
ಕರ್ನಾಟಕದ ಕ್ರಶ್ ಅಂತಾನೇ ಚಂದನವನದಲ್ಲಿ ಪ್ರಖ್ಯಾತಿ ಪಡೆದುಕೊಂಡಿರುವ ನಟಿ ರಶ್ಮಿಕಾ ನಟಿ ಸಾಯಿ ಪಲ್ಲವಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ರಶ್ಮಿಕಾ ವಿಷ್ ಮಾಡಿರುವುದು ಸ್ವಲ್ಪ ಸ್ಪೆಷಲ್ ಆಗಿದೆ ಅನ್ನಬಹುದು. ನಟಿ ರಶ್ಮಿಕಾ ಅವರಿಗೆ ಸಾಯಿ ಪಲ್ಲವಿ ಅಂದರೆ ತುಂಬಾ ಇಷ್ಟ ಅಂತೆ. ರಶ್ಮಿಕಾ ಅವರು ಸಾಯಿ ಪಲ್ಲವಿಯವರ ದೊಡ್ಡ ಅಭಿಮಾನಿಯಂತೆ. ಈ ಬಗ್ಗೆ ತಮ್ಮ ಇನ್‌ಸ್ಟಾಗ್ರಾಂ ನಲ್ಲಿ ರಶ್ಮಿಕಾ ಬರೆದುಕೊಂಡಿದ್ದಾರೆ. ಒಂದಲ್ಲ ಒಂದು ದಿನ ನಿಮ್ಮನ್ನು ನಾನು ಭೇಟಿ ಮಾಡುತ್ತೇನೆ. ಮೀಟ್ ಆದಾಗ ನಾನು ನಿಮ್ಮನ್ನ ಎಷ್ಟು ಇಷ್ಟ ಪಡುತ್ತೇನೆ ಎನ್ನುವುದನ್ನ ಕೂಡ ಹ ತಿಳಿಸುತ್ತೇನೆ ಎಂದಿದ್ದಾರೆ. ಸ್ಟೇಟಸ್ ಅನ್ನು ನೀವು ಓದುತ್ತೀರಾ ಎಂದುಕೊಂಡಿದ್ದೇನೆ ಎನ್ನುವುದನ್ನು ರಶ್ಮಿಕಾ ಬರೆದುಕೊಂಡಿದ್ದಾರೆ. ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಸಾಯಿ ಪಲ್ಲವಿಗೆ ಹೆಚ್ಚಿನ ಬೇಡಿಕೆ ಇದ್ದು ಸಿಕ್ಕಾಪಟ್ಟೆ ಬಿಜಿಯಾಗಿದ್ದಾರೆ.
Comments