ದಚ್ಚು ಅಭಿನಯದ 'ಕುರುಕ್ಷೇತ್ರ' ಸಿನಿಮಾ ರಿಲೀಸ್ ಬಗ್ಗೆ ಮಾಹಿತಿ ಇಲ್ಲಿದೆ..!!

09 May 2018 12:45 PM | Entertainment
1724 Report

ಆರಂಭದಿಂದಲೂ ಅಭಿಮಾನಿಗಳು, ಸಿನಿರಸಿಕರಲ್ಲಿ ಭಾರೀ ಕುತೂಹಲ ಮೂಡಿಸಿರುವ 'ಕುರುಕ್ಷೇತ್ರ' ಸಿನಿಮಾದ ರಿಲೀಸ್ ಬಗ್ಗೆ ಕೆಲವು ಮಾಹಿತಿ ಸಿಕ್ಕಿದೆ.. ಯಾವಾಗ ರಿಲೀಸ್ ಅಂತೀರಾ..,ಆಗದ್ರೆ ಮುಂದೆ ಓದಿ...

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50 ನೇ ಚಿತ್ರ 'ಕುರುಕ್ಷೇತ್ರ' ಕಣ್ತುಂಬಿಕೊಳ್ಳಲು ಕಾಯುತ್ತಿರುವ ಅಭಿಮಾನಿಗಳಿಗೆ ಮಾಹಿತಿ ಇಲ್ಲಿದೆ. ಚಿತ್ರದ ನಿರ್ಮಾಪಕ ಮುನಿರತ್ನ ವಿಧಾನಸಭೆ ಚುನಾವಣೆಯಲ್ಲಿ ನಿರತರಾಗಿರುವುದರಿಂದ ಚುನಾವಣೆ ಮುಗಿದ ಬಳಿಕ ಚಿತ್ರ ಬಿಡುಗಡೆ ಮಾಡಲು ಯೋಜಿಸಲಾಗಿದೆ. ಆರಂಭದಿಂದಲೂ ಅಭಿಮಾನಿಗಳು, ಸಿನಿರಸಿಕರಲ್ಲಿ ಭಾರೀ ಕುತೂಹಲ ಮೂಡಿಸಿರುವ 'ಕುರುಕ್ಷೇತ್ರ' ಈ ವೇಳೆಗೆ ರಿಲೀಸ್ ಆಗಬೇಕಿತ್ತು. ಶೂಟಿಂಗ್ ವಿಳಂಬ, ಚುನಾವಣೆ ಕಾರಣದಿಂದ ಚಿತ್ರದ ಆಡಿಯೋ ಬಿಡುಗಡೆ ವಿಳಂಬವಾಗಿದೆ. ಎಲೆಕ್ಷನ್ ಮುಗಿದ ಕೂಡಲೇ ಚಿತ್ರವನ್ನು ತೆರೆಗೆ ತರಲು ಪ್ಲಾನ್ ಮಾಡಿಕೊಳ್ಳಲಾಗಿದೆ. ದರ್ಶನ್, ಅಂಬರೀಶ್, ರವಿಚಂದ್ರನ್, ಅರ್ಜುನ್ ಸರ್ಜಾ, ನಿಖಿಲ್ ಕುಮಾರ್ ಸೇರದಿಂತೆ ಘಟಾನುಘಟಿ ಕಲಾವಿದರು ಚಿತ್ರದಲ್ಲಿದ್ದಾರೆ. ಅದ್ಧೂರಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಚಿತ್ರವನ್ನು ನಾಗಣ್ಣ ನಿರ್ದೇಶಿಸಿದ್ದಾರೆ.

Edited By

Shruthi G

Reported By

Shruthi G

Comments