'ಕುರುಕ್ಷೇತ್ರ' ನಿರೀಕ್ಷೆಯಲ್ಲಿದ್ದವರಿಗೊಂದು ಸಿಹಿಸುದ್ದಿ..!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷಿತ 50 ನೇ ಚಿತ್ರವಾದ 'ಕುರುಕ್ಷೇತ್ರ' ಕಣ್ತುಂಬಿಕೊಳ್ಳಲು ಕಾಯುತ್ತಿರುವ ಅಭಿಮಾನಿಗಳಿಗೆ ಚಿತ್ರ ತಂಡ ಸಿಹಿಸುದ್ದಿಯನ್ನು ನೀಡಿದೆ.
ಕುರುಕ್ಷೇತ್ರ ಚಿತ್ರದ ನಿರ್ಮಾಪಕರಾದ ಮುನಿರತ್ನ ವಿಧಾನಸಭೆ ಚುನಾವಣೆಯಲ್ಲಿ ಬಿಸಿಯಾಗಿರುವುದರಿಂದ ಚುನಾವಣೆ ಮುಗಿದ ಬಳಿಕ ಚಿತ್ರ ಬಿಡುಗಡೆ ಮಾಡಲು ಮುಂದಾಗಿದೆ. ಆರಂಭದಿಂದಲೂ ಅಭಿಮಾನಿಗಳು, ಸಿನಿರಸಿಕರಲ್ಲಿ ಭಾರೀ ಕುತೂಹಲ ಮೂಡಿಸಿರುವ 'ಕುರುಕ್ಷೇತ್ರ' ಈ ವೇಳೆಗೆ ರಿಲೀಸ್ ಆಗಬೇಕಿತ್ತು.ಆದರೆ ಶೂಟಿಂಗ್ ವಿಳಂಬ, ಚುನಾವಣೆ ಕಾರಣದಿಂದ ಚಿತ್ರದ ಆಡಿಯೋ ಬಿಡುಗಡೆಯೂ ಕೂಡ ವಿಳಂಬವಾಗಿದೆ. ಎಲೆಕ್ಷನ್ ಮುಗಿದ ಕೂಡಲೇ ಚಿತ್ರವನ್ನು ತೆರೆಗೆ ತರಲು ಚಿತ್ರ ತಂಡ ಪ್ಲಾನ್ ಮಾಡಿಕೊಳ್ಳಲಾಗಿದೆ. ದರ್ಶನ್, ಅಂಬರೀಶ್, ರವಿಚಂದ್ರನ್, ಅರ್ಜುನ್ ಸರ್ಜಾ, ನಿಖಿಲ್ ಕುಮಾರ್ ಸೇರದಿಂತೆ ಘಟಾನುಘಟಿ ಕಲಾವಿದರು ಚಿತ್ರದಲ್ಲಿದ್ದಾರೆ. ಅದ್ಧೂರಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಚಿತ್ರವನ್ನು ನಾಗಣ್ಣ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರ ತೆರೆಯ ಮೇಲೆ ಯಾವ ರೀತಿ ಮೂಡಿ ಬರುತ್ತದೆ ಅನ್ನೋದನ್ನ ಕಾದು ನೋಡಬೇಕಿದೆ.
Comments