ಅಭಿಮಾನಿಗಳ ಮುಂದೆ ನಿಂತು ಕೈಮುಗಿದ ಚಂದನ್ - ಶೃತಿ : ಕಾರಣ ಏನ್ ಗೊತ್ತಾ?



ಕನ್ನಡ ಕಿರುತರೆಯಲ್ಲಿ ಸಾಕಷ್ಟು ಹೆಸರು ಮಾಡಿದ ರಿಯಾಲಿಟಿ ಷೋ ಅಂದರೆ ಅದು ಬಿಗ್ ಬಾಸ್. ಹೌದು ಎಷ್ಟೆ ಕೆಲಸ ಇದ್ದರೂ ಕೂಡ ಅದನ್ನೆಲ್ಲಾ ಬಿಟ್ಟು ಟಿ ವಿ ಮುಂದೆ ಕೂರುವ ಅಭಿಮಾನಿಗಳಿಗೆ ಲೆಕ್ಕವೆ ಇಲ್ಲ. ತಮಗೆ ಇಷ್ಟವಾದ ಸ್ಪರ್ಧಿಗೆ ವೋಟ್ ಮಾಡಿ ಅವರು ಗೆಲ್ಲಲೆ ಬೇಕು ಎನ್ನುವ ಅಭಿಮಾನಿಗಳು ಕೂಡ ಸಾಕಷ್ಟಿದ್ದಾರೆ.
ಕಳೆದ ಬಾರಿಯ ಬಿಗ್ ಬಾಸ್ ಕಾರ್ಯಕ್ರಮದ ಸ್ಪರ್ಧಿಗಳಾದ ಚಂದನ್ ಶೆಟ್ಟಿ ಮತ್ತು ಶೃತಿ ಪ್ರಕಾಶ್ ಜೋಡಿ ಸಾಕಷ್ಟು ಹೆಸರು ಮಾಡಿತ್ತು. ಇಧೀಗ ಆ ಜೋಡಿ ಮತ್ತೆ ಒಂದಾಗಿದ್ದಾರೆ. ಚಂದನ್ ಶೆಟ್ಟಿಯ ಹೊಸ ಹಾಡಿನಲ್ಲಿ ಶೃತಿ ಪ್ರಕಾಶ್ ಹಾಡುವುದರ ಜೊತೆಗೆ ನಟನೆಯನ್ನು ಕೂಡ ಮಾಡುತ್ತಿದ್ದಾರಂತೆ. ಬಿಗ್ ಬಾಸ್ ಮುಗಿಸಿಕೊಂಡು ಬಂದ ಮೇಲೆ ಚಂದನ್ ಅವರ ಯಾವುದೇ ಹಾಡು ಕೂಡ ಬಿಡುಗಡೆಯಾಗಿಲ್ಲ. ಆದರೆ ಇದೀಗ ಚಂದನ್ ತಮ್ಮ ಹೊಸ ಹಾಡಿನ ತಯಾರಿಯಲ್ಲಿ ಇದ್ದಾರೆ. ಅದಕ್ಕೆ ಒಳ್ಳೆಯ ಟೈಟಲ್ ಅನ್ನು ನೀವೆ ನೀಡಿ ಎಂದು ಅಭಿಮಾನಿಗಳ ಮುಂದೆ ಬಂದಿದ್ದಾರೆ. ಚಂದನ್ ತಮ್ಮ ಇನ್ಟಾಗ್ರಾಮ್ ಖಾತೆಯಲ್ಲಿ ಶೃತಿ ಪ್ರಕಾಶ್ ಜೊತೆಗೆ ಇರುವ ಫೋಟೋವೊಂದನ್ನು ಹಾಕಿ ಹೊಸ ಹಾಡಿಗೆ ಒಂದು ಹೆಸರು ನೀಡಿ ಎಂದು ಕೇಳಿಕೊಂಡಿದ್ದಾರೆ.ನಿಮಗೆ ಯಾವುದಾದರೂ ಟೈಟಲ್ ಮೈಂಡ್ ನಲ್ಲಿ ಬಂದ್ರೆ ಕಮೆಂಟ್ ಮಾಡಿ ತಿಳಿಸಿ.
Comments