'ರಾಧಾ ರಮಣ': 'ಅವನಿ' ರಿಯಲ್ಲೋ, ಡ್ಯೂಪ್ಲಿಕೇಟೋ.? ಹೊಸ ಟ್ವಿಸ್ಟ್…!!
ತಲೆಬುಡ ಇಲ್ಲದ ಟ್ವಿಸ್ಟ್ ಕೊಟ್ಟು ಧಾರಾವಾಹಿಯನ್ನ ರಬ್ಬರ್ ಎಳೆದ ಹಾಗೆ ಎಳೆಯೋದು ಬಿಟ್ಟು, ಸೀರಿಯಲ್ ಗೆ ಬೇಗ ಶುಭಂ ಹಾಡಿ ಅಂತ ವೀಕ್ಷಕರು ಬೊಂಬಡ ಹೊಡೆಯುವುದುಂಟು. ಅಚ್ಚರಿ ಅಂದ್ರೆ, 'ರಾಧಾ ರಮಣ' ಧಾರಾವಾಹಿ ಬಗ್ಗೆ ಹಾಗಾಗುತ್ತಿಲ್ಲ.
ರಾಧಾ ರಮಣ' ಧಾರಾವಾಹಿಯಲ್ಲಿ 'ಅವನಿ ಆಗಮನ' ಅಧ್ಯಾಯ ಶುರುವಾಗಿ ವಾರಗಳೇ ಉರುಳಿವೆ. ಇಷ್ಟು ದಿನ ''ಅವನಿ'ಯನ್ನ ಬೇಗ ರಮಣ್ ಕೈ ಸೇರಿಸಿ'' ಅಂತ ವೀಕ್ಷಕರು ಒತ್ತಾಯ ಮಾಡುತ್ತಿದ್ದರು. ವೀಕ್ಷಕರ ಇಚ್ಛೆಯಂತೆ 'ಅವನಿ' ರಮಣ್ ಗೆ ಸಿಕ್ಕಿದ್ದಾಯ್ತು. ಇದಕ್ಕೆ ಖುಷಿ ಪಡುವುದು ಬಿಟ್ಟು, ಹೊಸ ಡಿಬೇಟ್ ನಲ್ಲಿ ವೀಕ್ಷಕರು ತೊಡಗಿದ್ದಾರೆ. ಏನು ಅಂತೀರಾ...,ಇದರ ಝಲಕ್ ತಿಳಿಯ ಬೇಕಾದರೆ ಮುಂದೆ ಓದಿ…ಈ ಟ್ವಿನ್ಸ್ ನ ಅಂತರ ಕೇಳಿದರೆ ಶಾಕ್ ಆಗ್ತೀರಾ?'
''ರಮಣ್ ಗೆ ಸಿಕ್ಕಿರುವ 'ಅವನಿ' ರಿಯಲ್ ಅಲ್ಲ. ಆಕೆ ಡ್ಯೂಪ್ಲಿಕೇಟ್. ಸಿತಾರ ದೇವಿ ರಾತ್ರೋರಾತ್ರಿ ಮಾಸ್ಟರ್ ಪ್ಲಾನ್ ಮಾಡಿ, ಆಂಬ್ಯುಲೆನ್ಸ್ ನಿಂದ ಒರಿಜಿನಲ್ 'ಅವನಿ'ಯನ್ನ ಎಸ್ಕೇಪ್ ಮಾಡಿಸಿ, ಆ ಜಾಗಕ್ಕೆ ಬೇರೆಯವರನ್ನ ತಂದಿದ್ದಾರೆ'' ಅಂತ ವೀಕ್ಷಕರು ಊಹೆ ಮಾಡ್ತಿದ್ದಾರೆ. ಅಷ್ಟಕ್ಕೂ, ಈ ಐಡಿಯಾ 'ರಾಧಾ ರಮಣ' ಧಾರಾವಾಹಿಯ ನಿರ್ದೇಶಕರಿಗೆ ಹೊಳೆದಿದ್ಯೋ, ಇಲ್ವೋ.. ಗೊತ್ತಿಲ್ಲ. ಆದ್ರೆ, ವೀಕ್ಷಕರು ಮಾತ್ರ ಕಲ್ಪನೆ ಮಾಡಿಕೊಳ್ತಿದ್ದಾರೆ. 'ರಾಧಾ ರಮಣ' ಧಾರಾವಾಹಿಯಲ್ಲಿ ಇರಬಹುದಾದ ಹೊಸ ಟ್ವಿಸ್ಟ್ ಬಗ್ಗೆ ವೀಕ್ಷಕರು ಕಲರ್ಸ್ ಕನ್ನಡ ವಾಹಿನಿಯ ಅಫೀಶಿಯಲ್ ಫೇಸ್ ಬುಕ್ ಪುಟದಲ್ಲಿಯೇ ಕಾಮೆಂಟ್ ಮಾಡುತ್ತಿದ್ದಾರೆ. ''ಆಶಿತಾ ಒರಿಜಿನಲ್ 'ಅವನಿ' ಅಲ್ಲ. ಸಿತಾರ ದೇವಿ ಅದಾಗಲೇ 'ಅವನಿ'ಯನ್ನ ಕಿಡ್ನ್ಯಾಪ್ ಮಾಡಿದ್ದಾಗಿದೆ. ಇದೇ ಕಾರಣಕ್ಕೆ ಮೊದಲಿನಿಂದಲೂ, 'ಅವನಿ' ಮುಖವನ್ನ ತೋರಿಸಿಲ್ಲ'' ಎಂಬುದು ವೀಕ್ಷಕರ ಅಭಿಪ್ರಾಯ.''ಆಶಿತಾ 'ಅವನಿ' ಅಲ್ಲ. ಯಾಕಂದ್ರೆ, 'ಅವನಿ'ಯನ್ನ ಭಿಕ್ಷುಕ ನೋಡಿದಾಗ, ಅವನ ಎಕ್ಸ್ ಪ್ರೆಶನ್ ಒಂಥರಾ ಇತ್ತು'' ಅಂತ ನಿರ್ಧಾರಕ್ಕೆ ಬಂದುಬಿಟ್ಟಿದ್ದಾರೆ ವೀಕ್ಷಕರು.
Comments