ಗೆಳೆಯನಿಗೆ ಸಹಾಯ ಮಾಡಿದ ದಾಸ..!

ಸ್ಯಾಂಡಲ್ ವುಡ್ ನಲ್ಲಿ ನಟ ದರ್ಶನ್ ಅಂದ್ರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಪ್ರೀತಿ.. ತಮ್ಮ ಸ್ನೇಹಿತರಿಗಾಗಿ ಯಾವುದೇ ಸಹಾಯ ಬೇಕಾದರೂ ಮಾಡುತ್ತಾರೆ ಎನ್ನುವುದಕ್ಕೆ ಡಿ-ಬಾಸ್ ಸಾಕ್ಷಿ . ತಾವು ಬೆಳೆಯುವುದರ ಜೊತೆಗೆ ತಮ್ಮ ಜೊತೆ ಇರುವವರನ್ನು ಸಹ ಬೆಳೆಸುವ ಗುಣ ದರ್ಶನ್ ಅವರಿಗೆ ಮೊದಲಿನಿಂದಲೂ ಇದೆ. ಇನ್ನು ಸದ್ಯ ಮತ್ತೆ ದರ್ಶನ್ ತಮ್ಮ ಸ್ನೇಹಿತನಿಗಾಗಿ ಮತ್ತೊಂದು ಸಹಾಯವನ್ನು ಮಾಡಿದ್ದಾರೆ.
ನಟ ಯಶಸ್ ಸೂರ್ಯ ನಟನೆಯ 'ರಾಮಧಾನ್ಯ' ಸಿನಿಮಾಗೆ ದರ್ಶನ್ ಧ್ವನಿಗೂಡಿಸಿದ್ದಾರೆ. ಚಿತ್ರದ ಪ್ರಾರಂಭದ ಒಂದು ನಿಮಿಷ ಮತ್ತು ಕೊನೆಯ ಒಂದು ನಿಮಿಷ ಅವರ ಧ್ವನಿಯು ಬರಲಿದೆ. ಸಿನಿಮಾದ ಆಶಯವನ್ನು ದರ್ಶನ್ ತಮ್ಮ ಧ್ವನಿಯ ಮೂಲಕ ವೀಕ್ಷಕರಿಗೆ ವಿವರಿಸಲಿದ್ದಾರೆ. ದರ್ಶನ್ ಅವರ ಗೆಳೆಯರ ಬಳಗದಲ್ಲಿ ಗುರುತಿಸಿಕೊಂಡಿರುವ ಯಶಸ್ ಸೂರ್ಯಗಾಗಿ ದರ್ಶನ್ ಈ ಸಹಾಯವನ್ನು ಮಾಡುತ್ತಿದ್ದಾರೆ. ಮೊದಲು ದರ್ಶನ್ ‘ರಾಮಧಾನ್ಯ' ಸಿನಿಮಾದ ಟೀಸರ್ ಅನ್ನು ನೋಡಿ ಇಷ್ಟ ಪಟ್ಟು ತಮ್ಮ ಧ್ವನಿ ನೀಡಿದ್ದಾರಂತೆ. ಇನ್ನು 'ರಾಮಧಾನ್ಯ' ಸಿನಿಮಾದ ಆಡಿಯೋವನ್ನು ಸಹ ದರ್ಶನ್ ಮೇ 9ಕ್ಕೆ ಬಿಡುಗಡೆ ಮಾಡಲಿದ್ದಾರೆ. ಚಿತ್ರದಲ್ಲಿ ಸಾಫ್ಟ್ ವೇರ್ ಇಂಜಿನಿಯರ್, ರಾಮ, ಕನಕದಾಸ ಸೇರಿ ನಾಲ್ಕು ಬೇರೆ ಬೇರೆ ಶೇಡ್ ಗಳಲ್ಲಿ ಯಶಸ್ ಸೂರ್ಯ ನಟಿಸುತ್ತಿದ್ದಾರೆ. ನಾಗೇಶ್ ಕುಮಾರ್ ಚಿತ್ರದ ಆಕ್ಷನ್ ಕಟ್ ಹೇಳಿದ್ದಾರೆ. ಈ ಸಿನಿಮಾ ತೆರೆ ಮೇಲೆ ಯಾವ ರೀತಿ ಮೂಡಿ ಬರುತ್ತದೆ ಅನ್ನೊದನ್ನ ಕಾದು ನೋಡಬೇಕಿದೆ.
Comments