ಕಾಣೆಯಾದ ಹೆಣ್ಣು ಮಕ್ಕಳ ಜೀವನಗಾಥೆಗೆ ಧ್ವನಿಯಾಗಿದ್ದಾರೆ ಪವರ್ ಸ್ಟಾರ್..!

ಕಲಾವಿದ ಅಂದರೆ ಕೇವಲ ನಟನೆಯಲ್ಲಿ ಅಷ್ಟೆ ಅಲ್ಲ ..ಬೇರೆ ಕ್ಷೇತ್ರಗಳಲ್ಲಿಯೂ ಕೂಡ ತಮ್ಮ ಸೇವೆ ಸಲ್ಲಿಸಬೇಕು ಎಂದು ತೋರಿಸಿಕೊಟ್ಟ ನಟ ಅಂದರೆ ಅದು ಡಾ ರಾಜ್ ಕುಮಾರ್. ಅದೇ ದಾರಿಯಲ್ಲಿ ಅವರ ಪುತ್ರ ಪುನೀತ್ ರಾಜ್ ಕುಮಾರ್ ಕೂಡ ಸಾಗುತ್ತಿದ್ದಾರೆ. ಸಿನಿಮಾ ಅಭಿನಯದ ಜೊತೆ ಜೊತೆಯಲ್ಲಿ ನಿರ್ಮಾಣ, ಗಾಯನ, ಸಮಾಜ ಸೇವೆ ಹೀಗೆ ಸಾಕಷ್ಟು ಕೆಲಸಗಳಲ್ಲಿ ಪುನೀತ್ ತಮ್ಮನ್ನ ತಾವು ತೊಡಗಿಸಿಕೊಂಡಿದ್ದಾರೆ ಎಂದರೆ ತಪ್ಪಾಗುವುದಿಲ್ಲ.
ಇತ್ತೀಚಿಗಷ್ಟೆ ಪುನೀತ್ ರಾಜ್ ಕುಮಾರ್ 'ಅಮೋಲಿ' ಎಂಬ ಶೀರ್ಷಿಕೆಯ ಸಾಕ್ಷ್ಯಚಿತ್ರಕ್ಕೆ ಧ್ವನಿಯಾಗಿದ್ದಾರೆ. 29 ನಿಮಿಷವಿರುವ ಈ ಸಾಕ್ಷ್ಯಚಿತ್ರ ರಾಷ್ಟ್ರಪ್ರಶಸ್ತಿ ವಿಜೇತರಾದ ಜಾಸ್ಮಿನ್ ಮತ್ತು ಅವಿನಾಶ್ ರಾಯ್ ನಿರ್ದೇಶನದಲ್ಲಿ ಮೂಡಿಬಂದಿದೆ. ಭಾರತದಲ್ಲಿ ಕಾಣೆಯಾಗುತ್ತಿರುವ ಹೆಣ್ಣುಮಕ್ಕಳ ಕುರಿತ ಕಥೆ ಇದಾಗಿದೆ. ಕಾಣೆಯಾದವರು ಎಲ್ಲಿ ಹೋಗುತ್ತಾರೆ? ಅವರಿಗೆ ಏನಾಗುತ್ತದೆ ಎನ್ನುವ ವಿಚಾರಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನವನ್ನು ಈ ಮೂಲಕ ಮಾಡಲಾಗಿದೆ. ಅಮೋಲಿ ಎಂಬ ಸಾಕ್ಷ್ಯಾಚಿತ್ರದಲ್ಲಿ ನಾಲ್ಕು ಕಾಣೆಯಾಗಿರುವ ಬಾಲಕಿಯರ ನೈಜ ಕಥೆಯನ್ನ ಎಳೆಎಳೆಯಾಗಿ ಬಿಚ್ಚಿಡಲಾಗಿದೆ. ಆದರೆ ಇದು ಕೇವಲ ಈ ನಾಲ್ಕು ಜನರ ವ್ಯಥೆ ಮಾತ್ರವಲ್ಲ ದೇಶದಲ್ಲಿ ಇಂತಹ ಸಾಕಷ್ಟು ಹೆಣ್ಣು ಮಕ್ಕಳು ಈ ಜಾಲದಲ್ಲಿ ಸಿಲುಕಿ ಪರದಾಡುತ್ತಿದ್ದಾರೆ.ಅವರ ಬದುಕಿನ ಜೀವನ ಗಾಥೆಯೇ ಈ ಅಮೋಲಿ.
Comments