ನಟ ಸುದೀಪ್ ರನ್ನು ಭೇಟಿ ಮಾಡಿದ ಸಲ್ಮಾನ್ ಖಾನ್ ಸಹೋದರರು!
ಸ್ಯಾಂಡಲ್ ವುಡ್ ನಟನಾದ ಕಿಚ್ಚ ಸುದೀಪ್ ಅವರನ್ನು ಬಾಲಿವುಡ್ ನ ಸಲ್ಮಾನ್ ಖಾನ್ ಸಹೋದರರಾದ ಸೋಹೆಲ್ ಖಾನ್ ಹಾಗೂ ಅರ್ಬಾಜ್ ಖಾನ್ ಭೇಟಿ ಮಾಡಿದ್ದಾರಂತೆ.
ಇತ್ತೀಚಿಗೆ ಸೋಹೆಲ್ ಖಾನ್ ಮತ್ತು ಅರ್ಬಾಜ್ ಖಾನ್ ಬೆಂಗಳೂರಿಗೆ ಬಂದಿದ್ದು ಆ ಸಮಯದಲ್ಲಿ ಕಿಚ್ಚನನ್ನು ಭೇಟಿ ಮಾಡಿದ್ದಾರೆ. ರಾಜ್ಯ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಈ ಸಹೋದರರು ಎಂಇಪಿ ಪಕ್ಷದ ಪರವಾಗಿ ಪ್ರಚಾರ ಮಾಡಲು ಬೆಂಗಳೂರಿಗೆ ಬಂದಿದ್ದರು. ಈ ವೇಳೆ ಕಿಚ್ಚ ಸುದೀಪ್ ಅವರನ್ನು ಭೇಟಿ ಮಾಡಿ ಮಾತನಾಡಿಸಿದ್ದಾರಂತೆ. ಸೋಹೆಲ್ ಖಾನ್, ಅರ್ಬಾಜ್ ಖಾನ್ ಹಾಗೂ ಸೋನು ಸೂದ್ ಜೊತೆ ಸುದೀಪ್ ಸೆಲ್ಫಿ ತೆಗೆದುಕೊಂಡು ಅದನ್ನು ತಮ್ಮ ಟ್ವೀಟರ್ ನಲ್ಲಿ ಹಾಕಿಕೊಂಡಿದ್ದಾರೆ. ನನ್ನ ಸಹೋದರರಾದ ಸೋಹೆಲ್ ಖಾನ್ ಹಾಗೂ ಅರ್ಬಾಜ್ ಖಾನ್ ಜೊತೆ ಕೆಲ ಕಾಲ ಕಳೆದಿದ್ದು, ಖುಷಿಯಾಯಿತು. ಮುಂದೆ ಕೂಡ ಈ ರೀತಿಯ ಭೇಟಿಗಾಗಿ ಕಾಯುತ್ತಿದ್ದೇನೆ ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.
Comments