ಅಭಿಮಾನಿಗೆ ಪ್ರಿನ್ಸ್ ಮಹೇಶ್ ಬಾಬು ಕೊಟ್ಟ ಸರ್ ಪ್ರೈಸ್ ಏನು ಗೊತ್ತಾ?
ಇತ್ತಿಚಿಗೆ ನಾಯಕ ನಟರು ಮತ್ತು ನಾಯಕ ನಟಿಯರು ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳ ಜೊತೆ ನಿಕಟವಾಗಿ ಸಂಪರ್ಕದಲ್ಲಿರುತ್ತಾರೆ. ಅದೇ ರೀತಿಯಾಗಿ ಅಭಿಮಾನಿಯ ಸುಖ ದುಖಃ ಕ್ಕೆ ಸ್ಪಂದಿಸಿರುವ ಪ್ರಿನ್ಸ್ ಮಹೇಶ್ ಅಭಿಮಾನಿಗೆ ಸರ್ ಪ್ರೈಸ್ ಗಿಪ್ಟ್ ಅನ್ನು ನೀಡಿದ್ದಾರೆ.
ಎಸ್… ಸುಲೇಖ ಎಂಬುವವರು ಇತ್ತೀಚೆಗೆ ಹೈದರಾಬಾದ್‍ನಲ್ಲಿ ವಿವಾಹವಾಗಿದ್ದರು.. ಫ್ರಿನ್ಸ್ ಮಹೇಶ್ ಬಾಬು ಅವರ ಅಪ್ಪಟ ಅಭಿಮಾನಿಯಾಗಿದ್ದ ಸುಲೇಖ ಅವರ ಮದುವೆಯ ಆಹ್ವಾನ ಪತ್ರಿಕೆಯನ್ನು ಅವರ ಸಂಬಂಧಿಕರು ಪ್ರಿನ್ಸ್ ಮಹೇಶ್ ಬಾಬು ಅವರಿಗೆ ಕಳುಹಿಸಿದ್ದರು. ಆಗ ಮಹೇಶ್ ಬಾಬು ಅವರು ಸ್ವತಃ ತಾವೇ ತಯಾರು ಮಾಡಿದಂತಹ ಗ್ರೀಟಿಂಗ್ ಕಾರ್ಡ್ ನ್ನು ಉಡುಗೊರೆಯಾಗಿ ಕಳುಹಿಸಿದ್ದು, ಆ ಕಾರ್ಡನ್ನು ಸುಲೇಖಾ ಮದುವೆ ದಿನ ಆಕೆಯ ಸಂಬಂಧಿಕರು ಉಡುಗೊರೆಯಾಗಿ ನೀಡಿದ್ದಾರೆ. ಆ ಕಾರ್ಡ್ ನಲ್ಲಿ ನಟ ಮಹೇಶ್ ಬಾಬು ಹಾಗೂ ಅವರ ಪತ್ನಿ ನಮ್ರತಾ ಸಿರೋದ್ಕರ್ ತಮ್ಮ ಆಟೋಗ್ರಾಫ್ ನೀಡಿದ್ದನ್ನು ಕಂಡು ಸುಲೇಖ ತುಂಬಾ ಖುಷಿಯಾಗಿದ್ದಾರೆ.
Comments